ADVERTISEMENT

ಬಣ್ಣಗಳಲ್ಲಿ ಅರಳಿದ ಗುಬ್ಬಚ್ಚಿ ಕಥನ

ಪಾಲಾಕ್ಷ ಬ ತಿಪ್ಪಳ್ಳಿ
Published 27 ಜೂನ್ 2018, 20:18 IST
Last Updated 27 ಜೂನ್ 2018, 20:18 IST
   

ಇಂದಿನ ದಿನಮಾನದಲ್ಲಿ ಅತಿಯಾದ ಆಧುನಿಕ ತಂತ್ರಜ್ಞಾನ ಬಳಕೆಯಿಂದಾಗಿ, ಜಗತ್ತು ಮುಂದುವರೆದಿದೆ ವಿನಃ ಪಕ್ಷಿಸಂಕುಲದ ಮಾರಣಹೋಮ ಗಣನೀಯವಾಗಿದೆ.

ಮನುಷ್ಯನು ಕಷ್ಟ ಅಂತ ಬಂದಾಗ ದೇವರ ಮೊರೆ ಹೋಗುವುದು ಸಾಮಾನ್ಯ. ಆದರೆ ಇಲ್ಲಿ ಅಳಿವಿನಂಚಿನಲ್ಲಿರುವ ಗುಬ್ಬಚ್ಚಿ ತನ್ನ ನೆಲೆ ಕಾಣದೇ ಗೂಡು ಕಟ್ಟಿಕೊಳ್ಳಲು ಜಾಗವಿಲ್ಲದೇ ದೇವರ ಹುಡುಕಾಟದಲ್ಲಿ ತೊಡಗಿದೆ. ತನ್ನ ಉಳಿಯುವಿಕೆಗಾಗಿ ಎಲ್ಲಿ ನಾನು ಜೀವನ ಮಾಡುವುದು, ನನಗೆ ನೆಲೆ ಸಿಗುವುದಾದರೆ ಎಲ್ಲಿ ಎಂದು ದೇವರ ಮೊರೆ ಹೋಗುತ್ತಿರುವುದನ್ನು ಕಲಾವಿದ ಶಂಕರಪ್ಪ ಕಲ್ಯಾಡಿ ಅವರ ಕಲಾಕೃತಿಯಲ್ಲಿ ಅದ್ಬುತವಾಗಿ ಮೂಡಿ ಬಂದಿದೆ.

ಶಂಕರಪ್ಪ ಕಲ್ಯಾಡಿ ಮೂಲತಃ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಕಲ್ಯಾಡಿಯರು.ವೃತ್ತಿಯಿಂದ ಚಿತ್ರಕಲಾ ಶಿಕ್ಷಕರಾಗಿ ಮಂಡ್ಯ ಜಿಲ್ಲೆಯ ಬೆಳ್ಳೂರಿನ ಎಎಲ್ ಕೆ ಪ.ಪೂ. ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಐತಿಹಾಸಿಕ ಸ್ಥಳಗಳ ಕಲಾಕೃತಿಯಲ್ಲಿ ಗುಬ್ಬಚ್ಚಿ ವಿಷಯಗಳೆಂದರೆ ಅವರಿಗೆ ಅಚ್ಚುಮೆಚ್ಚು.

ADVERTISEMENT

ಇಲ್ಲಿ ಪ್ರತಿಯೊಂದು ಕಲಾಕೃತಿಗಳಲ್ಲಿ ಗುಬ್ಬಚ್ಚಿಯನ್ನೇ ಕೇಂದ್ರ ಸ್ಥಾನದಲ್ಲಿರಿಸಿ ಚಿತ್ರ ಬಿಡಿಸಿರುವುದು ವಿಶೇಷ. ಗುಬ್ಬಚ್ಚಿಯನ್ನು ಪ್ರತಿಯೊಂದು ಚಿತ್ರದಲ್ಲಿ ಮೂಡಿಸುವ ರೂಢಿ ಐದಾರು ವರ್ಷಗಳಿಂದ ಬೆಳೆದು ಬಂದಿದೆ.

ಹಾಸನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ, ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ರಚಿಸಿದವರು ಇವರೇ. ತೊಗಲು ಗೊಂಬೆ ಮತ್ತು ಪಿಕಾಸೋ ಚಿತ್ರಣ ಕುರಿತು ತುಲನಾತ್ಮಕ ಅಧ್ಯಯನ ಪ್ರಬಂಧವನ್ನು ಮಂಡಿಸಿದ್ದಾರೆ.

ಇವರು ಕಲಾಕೃತಿಯನ್ನು ತಯಾರಿಸುವವರಿಗೆ ಮತ್ತು ಕಲೆಯಲ್ಲಿ ಆಸಕ್ತಿ ಇರುವವರಿಗೆ ಉಚಿತ ತರಬೆತಿಯನ್ನು ನೀಡುತ್ತಾರೆ.

ಮುಂದಿನ ದಿನಗಳಲ್ಲಿ ಪಕ್ಷಿಗಳನ್ನು ಚಿತ್ರಗಳ ಮೂಲಕ ತೋರಿಸುವಂತಾಗಬಾರದು. ಸಾಧ್ಯವಾದಷ್ಟು ಪಕ್ಷಿ ಸಂಕುಲವನ್ನು ಬದುಕಲು ಪ್ರೇರಣೆ ನೀಡಬೇಕು ಎಂಬ ಕಳಕಳಿ ಇವರದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.