ADVERTISEMENT

ಮಹಿಳಾ ಪ್ರಧಾನ ಪಾತ್ರ ಸಿಕ್ಕರೆ ಬಿಡಲ್ಲ: ತಮನ್ನಾ ಭಾಟಿಯಾ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 19:45 IST
Last Updated 29 ಏಪ್ರಿಲ್ 2019, 19:45 IST
ತಮನ್ನಾ ಭಾಟಿಯಾ
ತಮನ್ನಾ ಭಾಟಿಯಾ   

ಲೀವರ್‌ ಆಯುಷ್‌ ಉತ್ಪನ್ನಗಳ ಬಿಡುಗಡೆಗಾಗಿ ನಗರಕ್ಕೆ ಬಂದಿದ್ದ ಟಾಲಿವುಡ್ ಬೆಡಗಿ ತಮನ್ನಾ ಭಾಟಿಯಾ, ‘ಮೆಟ್ರೊ‘ ನಡೆಸಿದ ಸಂದರ್ಶನದಲ್ಲಿ ತಮ್ಮ ಸಿನಿ ಪಯಣದ ಕುರಿತು ಹರಟಿದ್ದಾರೆ...

‘ರಾಜು ಗಾರಿ ಗದಿ 3‘ ಸಿನಿಮಾ, ನಿಮ್ಮ ಸಿನಿ ಭವಿಷ್ಯದಲ್ಲಿ ಯಾಕೆ ಮುಖ್ಯವಾದದ್ದು?

ಇದಕ್ಕೆ ದೊಡ್ಡ ಕಾರಣ ಇದೆ. ನಾನು ‘ತಮನ್ನಾ ಭಾಟಿಯಾ’ ಎಂದು ಗುರುತಿಸಿಕೊಂಡಿರುವುದು ದೊಡ್ಡ ಸ್ಟಾರ್‌ಗಳ ಸಿನಿಮಾದಿಂದ ಮಾತ್ರ ಅಲ್ಲ. ಮಹಿಳಾ ಪ್ರಧಾನ ಸಿನಿಮಾಗಳು ನನಗೆ ಸಾಕಷ್ಟು ಹೆಸರು ತಂದುಕೊಟ್ಟಿವೆ. ನನ್ನ ಅಸ್ಮಿತೆಯನ್ನು ಕಂಡುಕೊಟ್ಟಿವೆ. ಈ ಸಿನಿಮಾ ಕೂಡ ಅಂತದ್ದೊಂದು ವಿಶ್ವಾಸವನ್ನು ನನಗೆ ನೀಡುವ ಭರವಸೆ ಇದೆ.

ADVERTISEMENT

ಯಾಕೆ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಅಭಿನಯಿಸಲು ಇಷ್ಟಪಡುತ್ತೀರಿ?

ಕಥೆ ಕುತೂಹಲಕಾರಿಯಾಗಿ ಇರುತ್ತದೆ. ನನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇರುತ್ತದೆ. ಭವಿಷ್ಯದಲ್ಲಿ ನನಗೆ ಒಳ್ಳೆ ಹೆಸರು ತಂದುಕೊಡಲಿದೆ. ಇಷ್ಟು ಕಾರಣ ಸಾಕಲ್ವಾ..

ನಿಮ್ಮ ಬಾಲಿವುಡ್‌ ಪ್ರಯಾಣ ಯಾಕೆ ಮೊಟಕುಗೊಂಡಿದೆ?

ಬಾಲಿವುಡ್‌ನಲ್ಲಿ ನಾನು ಈಗ ಯಾವುದೇ ಸಿನಿಮಾ ಮಾಡುತ್ತಿಲ್ಲ. ದಕ್ಷಿಣ ಭಾರತದಲ್ಲೇ ಸಾಕಷ್ಟು ಅವಕಾಶಗಳು ಇವೆ. ದಿನಾಂಕ ಹೊಂದಾಣಿಸುವುದೇ ಕಷ್ಟವಾಗಿದೆ. ಹೀಗಿದ್ದಾಗ ಆ ಕಡೆ ಯೋಚಿಸಲೂ ಸಮಯ ಸಿಕ್ಕಿಲ್ಲ. ಮುಂದೆ ಅವಕಾಶ ಸಿಕ್ಕಾಗ ಮಾಡುತ್ತೇನೆ.

ನಿಮ್ಮ ಅಭಿನಯದ ಯಾವ ಸಿನಿಮಾ ನಿಮ್ಮನ್ನು ಹೆಚ್ಚು ಕಾಡಿದೆ?

ಪಯ್ಯಾ. ಈ ಸಿನಿಮಾ ಮೂಲಕವೇ ನಾನು ನಟಿಯಾಗಿ ರೂಪುಗೊಂಡೆ, ಹ್ಯಾಪಿಡೇಸ್‌, ಬಾಹುಬಲಿ ಕೂಡ ದೊಡ್ಡ ಹೆಸರು ತಂದುಕೊಟ್ಟವು.

ಅಭಿಮಾನಿಗಳ ಪ್ರೀತಿ ನಿಮಗೆ ಕಿರಿಕಿರಿಯಾದ ಸಂದರ್ಭ ಇದೆಯೇ?

ಖಂಡಿತಾ ಇಲ್ಲ. ಆ ರೀತಿ ಕಿರಿಕಿರಿ ಮಾಡಿಕೊಂಡರೆ ಅಲ್ವಾ ಸಮಸ್ಯೆ ಆಗೋದು. ನಾನು ಅಭಿಮಾನಿಗಳ ಪ್ರೀತಿಯನ್ನು ಎಂಜಾಯ್‌ ಮಾಡುತ್ತೇನೆ. ಅವರನ್ನು ಸದಾ ನಗುತ್ತಾ ಮಾತಾಡಿಸುತ್ತೇನೆ.

ಕನ್ನಡ ಸಿನಿಮಾದಲ್ಲಿ ನಟಿಸುತ್ತೀರಾ, ಅವಕಾಶ ಸಿಕ್ಕಾಗ ಯಾವ ನಟರೊಂದಿಗೆ ನಟಿಸಲು ಇಷ್ಟಪಡುತ್ತೀರಿ?

ಖಂಡಿತಾ ಅದು ಪುನೀತ್ ರಾಜ್‌ಕುಮಾರ್‌ ಅವರೇ ಆಗಿರುತ್ತಾರೆ. ಯಾಕೆಂದರೆ ಈ ಮೊದಲು ಅವರೊಂದಿಗೆ ಜಾಹೀರಾತು ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದೇನೆ. ಅವರೊಂದಿಗೆ ನಟಿಸುವ ಅವಕಾಶ ಸಿಕ್ಕರೆ ಯೋಚಿಸದೇ ಒಪ್ಪಿಕೊಳ್ಳುತ್ತೇನೆ.

ನಿಮ್ಮ ಸೌಂದರ್ಯ ಹಾಗೂ ಕ್ರಿಯಾಶೀಲತೆಯ ಗುಟ್ಟೇನು?

ಸೌಂದರ್ಯಕ್ಕೆ ಕಾರಣ ಆಯುರ್ವೇದ. ಲೀವರ್‌ ಆಯುಷ್‌ನಂತಹ ಉತ್ಪನ್ನಗಳನ್ನು ಬಳಸಿದರೆ ಸೌಂದರ್ಯ ಕಾಪಾಡಿಕೊಳ್ಳಬಹುದು. ಬೇಸಿಗೆಯಲ್ಲಿ ನನ್ನ ತ್ವಚೆಯನ್ನು ಶುಷ್ಕವಾಗಿರದಂತೆ ನೋಡಿಕೊಳ್ಳುತ್ತೇನೆ. ನನ್ನಿಂದ ಏನನ್ನು ಬೇಡುತ್ತದೆಯೋ ಅದೆಲ್ಲವನ್ನೂ ಮಾಡುತ್ತೇನೆ. ಹೊಸ ಶೈಲಿಯ ನೃತ್ಯದಿಂದ ಹಿಡಿದು, ಕೇಶ ಅಲಂಕಾರದವರೆಗೂ ಕಾಳಜಿ ವಹಿಸುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.