ದೇಶಿ, ವಿದೇಶಿ ತಿನಿಸುಗಳ ‘ಅಂತರರಾಷ್ಟ್ರೀಯ ಸಸ್ಯಾಹಾರ ಮೇಳ’ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ವೇದಿಕೆ ಸಜ್ಜಾಗುತ್ತಿದೆ. ಇದೇ ಅ. 18ರಿಂದ 20ರವರೆಗೆ ಈ ಮೇಳ ನಡೆಯಲಿದೆ.
ಸಿಲಿಕಾನ್ ಸಿಟಿಯ ಯಾವ ರೆಸ್ಟೊರೆಂಟ್‌ನಲ್ಲೂ ಲಭ್ಯವಿರದ, ಬಾಯಲ್ಲಿ ನೀರೂರಿಸುವ ಬಗೆ ಬಗೆಯ ತಿನಿಸುಗಳಿಗಾಗಿ ಇಲ್ಲಿಗೆ ಒಮ್ಮೆ ಲಗ್ಗೆ ಇಡಬಹುದು. ಲಯನ್ಸ್ ಕ್ಲಬ್ ಸಹಯೋಗದಲ್ಲಿ ಈ ಮೇಳವನ್ನು ಆಯೋಜಿಸಲಾಗುತ್ತಿದೆ. ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಮೇಳದಲ್ಲಿನ ಮಳಿಗೆಗಳು ಆಸಕ್ತರ ಜಿಹ್ವಾ ಚಾಪಲ್ಯ ತೀರಿಸಲಿವೆ.ಇದು ಏಷ್ಯಾದಲ್ಲಿಯೇ ಅತಿದೊಡ್ಡ ಸಸ್ಯಾಹಾರ ಉತ್ಸವವಾಗಲಿದೆ. ಒಂದು ಲಕ್ಷಕ್ಕೂ ಅಧಿಕ ಆಸಕ್ತರು, ಸಾವಿರಕ್ಕೂ ಅಧಿಕ ವೈವಿಧ್ಯ ಆಹಾರ ಬಗೆಗಳು, ನೂರಾರು ಮಳಿಗೆಗಳನ್ನು ಒಳಗೊಂಡ ಮಹಾ ಆಹಾರ ಮೇಳ ಇದಾಗಲಿದೆ.
ವೀಗನ್, ಇಟಾಲಿಯನ್, ಅಮೆರಿಕನ್,ಚೈನೀಸ್, ಬೀದಿ ತಿಂಡಿಗಳು ಮತ್ತಿತರ ತಿಂಡಿ ತಿನಿಸುಗಳನ್ನು ಇಲ್ಲಿ ಆಸ್ವಾದಿಸಬಹುದಾಗಿದೆ. ಇದರ ಜೊತೆಗೆ ಮನರಂಜನೆಯ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ಹೆಸರಾಂತ ಮ್ಯೂಸಿಕ್ ಬ್ಯಾಂಡ್‌ಗಳ ಸಂಗೀತ ರಸದೌತಣ ಮತ್ತು ಹಾಸ್ಯ ಕಾರ್ಯಕ್ರಮಗಳು ಮನರಂಜಿಸಲಿವೆ. ಆಹಾರೋತ್ಸವದಲ್ಲಿ ಅಡುಗೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯ ಮೊದಲ ಸುತ್ತು ಅ.18 ರಂದು ಹಾಗೂ ಕೊನೆಯ ಸುತ್ತು 19ರಂದು ನಡೆಯಲಿದೆ ಎನ್ನುತ್ತಾರೆ ಆಯೋಜಕರು.
ನಾಲ್ವರು ಆಹಾರ ಆಸಕ್ತರು 2017ರಲ್ಲಿ ಮಾಂಕ್ ಸ್ಟೂಡಿಯೋಸ್ ಸ್ಥಾಪಿಸಿದರು. ‘ಬೆಂಗಳೂರು ಆಹಾರೋತ್ಸವ’ಮಾಂಕ್ ಸ್ಟೂಡಿಯೋಸ್ ಕನಸಿನ ಕೂಸು. ಮಾಂಕ್ ಸ್ಟೂಡಿಯೋಸ್ ಒಂದು ಹೆಸರಾಂತ ರೆಸ್ಟೊರೆಂಟ್ ಕನ್ಸಲ್ಟಿಂಗ್, ಬ್ರ್ಯಾಂಡಿಂಗ್, ಮಾರ್ಕೆಟಿಂಗ್ ಮತ್ತು ಪಬ್ಲಿಸಿಟಿ ಕಂಪನಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.