ADVERTISEMENT

ಬೆಂಗಳೂರಿನಲ್ಲಿ 62 ಎಕರೆ ಟೌನ್‌ಶಿಪ್‌; ₹5 ಸಾವಿರ ಕೋಟಿ ಆದಾಯ– ಗೋದ್ರೇಜ್ ಮಾಹಿತಿ

ಪಿಟಿಐ
Published 4 ಮಾರ್ಚ್ 2024, 10:34 IST
Last Updated 4 ಮಾರ್ಚ್ 2024, 10:34 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ‘ರಾಜಧಾನಿ ಬೆಂಗಳೂರಿನಲ್ಲಿ 62 ಎಕರೆಯ ಟೌನ್‌ಶಿಪ್‌ ಅಭಿವೃದ್ಧಿಪಡಿಸುತ್ತಿದ್ದು, ಇದು ₹5 ಸಾವಿರ ಕೋಟಿ ಆದಾಯ ತಂದುಕೊಡಲಿದೆ’ ಎಂದು ಗೋದ್ರೇಜ್ ಕಂಪನಿಯು ಷೇರುಮಾರುಕಟ್ಟೆಗೆ ಮಾಹಿತಿ ನೀಡಿದೆ.

‘ಬೆಂಗಳೂರು ಉತ್ತರ ಭಾಗದಲ್ಲಿ ಬೃಹತ್ ಟೌನ್‌ಶಿಪ್ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಖರೀದಿ ಪ್ರಕ್ರಿಯೆ ಮತ್ತು ಅದರ ಒಡಂಬಡಿಕೆ ಪ್ರಕ್ರಿಯೆ ನಡೆದಿದೆ. ಈ 62 ಎಕರೆ ಪ್ರದೇಶದಲ್ಲಿ ಒಟ್ಟು 56 ಲಕ್ಷ ಚದರಡಿ ಪ್ರದೇಶ ಮಾರಾಟಕ್ಕೆ ಲಭ್ಯ. ಇದರಲ್ಲಿ ಹಲವು ಬಗೆಯ ವಿಲಾಸಿ ಅಪಾರ್ಟ್‌ಮೆಂಟ್‌ಗಳು ಇರಲಿವೆ’ ಎಂದು ಹೇಳಿದೆ.

ADVERTISEMENT

‘ಈ ಯೋಜನೆ 2014ರಲ್ಲೇ ಆರಂಭವಾದರೂ, ಈವರೆಗೂ ಅದನ್ನು ಕಾರ್ಯಗತಗೊಳಿಸಲು ಆಗಿರಲಿಲ್ಲ. ಆದರೆ ಕಳೆದ ಕೆಲವು ತಿಂಗಳುಗಳಿಂದ ಈ ಯೋಜನೆಯು ಮತ್ತೆ ಹರಳುಗಟ್ಟಿದೆ’ ಎಂದು ತನ್ನ ವರದಿಯಲ್ಲಿ ಹೇಳಿದೆ.

‘ಗೋದ್ರೇಜ್ ಸಮೂಹಕ್ಕೆ ಸೇರಿದ ಗೋದ್ರೇಜ್ ಪ್ರಾಪರ್ಟೀಸ್, 2025ರಲ್ಲಿ ಬೆಂಗಳೂರು ಉತ್ತರದಲ್ಲಿರುವ ತನ್ನ ಉದ್ದೇಶಿತ ಜಾಗದಲ್ಲಿ ಮನೆಗಳ ನಿರ್ಮಾಣ ಆರಂಭಿಸಲಿದೆ. ಇಲ್ಲಿ ನಿರ್ಮಾಣವಾಗುವ ಮನೆಗಳಿಂದ ಸಂದಾಯವಾಗುವ ಒಟ್ಟು ಮೊತ್ತ ₹5 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ’ ಎಂದಿದೆ.

ಗೋದ್ರೇಜ್ ಪ್ರಾಪರ್ಟೀಸ್ ತನ್ನ ವಹಿವಾಟನ್ನು ಸದ್ಯ ದೆಹಲಿ–ಎನ್‌ಸಿಆರ್, ಮುಂಬೈ ಮೆಟ್ರೊಪಾಲಿಟನ್ ರೀಜನ್, ಬೆಂಗಳೂರು ಹಾಗೂ ಪುಣೆಯಲ್ಲಿ ಹೊಂದಿದೆ. ಇತ್ತೀಚೆಗೆ ಹೈದರಾಬಾದ್ ಮಾರುಕಟ್ಟೆಯನ್ನೂ ಕಂಪನಿ ಪ್ರವೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.