ADVERTISEMENT

ಪೂಜಾ ಕೋಣೆಗಿರಲಿ ವಾಸ್ತು ನಿಯಮ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 12:17 IST
Last Updated 16 ಜೂನ್ 2018, 12:17 IST
ಪೂಜಾ ಕೋಣೆಗಿರಲಿ ವಾಸ್ತು ನಿಯಮ
ಪೂಜಾ ಕೋಣೆಗಿರಲಿ ವಾಸ್ತು ನಿಯಮ   

ಮನೆಯಲ್ಲಿ ಪೂಜಾ ಕೋಣೆಗೆ ವಿಶೇಷ ಪ್ರಾಧಾನ್ಯವಿದೆ. ಇದು ಮಾನಸಿಕ ನೆಮ್ಮದಿಯನ್ನು ನೀಡುವ ಸ್ಥಳವೂ ಹೌದು. ಪೂಜಾ ಕೋಣೆಯಲ್ಲಿ ಯಾವ ವಸ್ತು ಎಲ್ಲಿ, ಹೇಗಿರಬೇಕು ಎಂಬುದಕ್ಕೆ ಇಲ್ಲಿದೆ ಸಲಹೆ.

* ಮನೆಯ ಮುಖ್ಯ ಬಾಗಿಲಿನ ಎದುರು ಪೂಜಾ ಕೋಣೆ ಇರಬಾರದು, ಇದ್ದರೆ ಅದು ಪೂಜಾ ಕೋಣೆಯಲ್ಲಿ ಸೃಷ್ಟಿಯಾದ ಸಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ.

* ಪೂಜಾ ಕೋಣೆಯಲ್ಲಿ ಕತ್ತಲು ಇರಬಾರದು. ಕತ್ತಲಿರುವುದರಿಂದ ಮನೆ ಮಂದಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸದಾ ದೀಪ ಬೆಳಗುವಂತೆ ನೋಡಿಕೊಳ್ಳಬೇಕು.

ADVERTISEMENT

* ಮಲಗುವ ಕೋಣೆಯಲ್ಲಿ ಪೂಜಾ ಕೋಣೆ ಇರಬಾರದು.

* ಶೌಚಗೃಹದ ಋಣಾತ್ಮಕ ಶಕ್ತಿ ಪೂಜಾ ಕೋಣೆಯ ಶುಭ ವಾತಾವರಣವನ್ನು ಹಾಳು ಮಾಡುತ್ತದೆ. ಪೂಜಾ ಕೋಣೆಯ ಮೇಲೆ, ಕೆಳಗೆ ಸ್ನಾನದ ಕೋಣೆ ನಿರ್ಮಿಸುವುದನ್ನು ತಪ್ಪಿಸಿ.

* ಮನೆಯ ಉತ್ತರ, ಪೂರ್ವ ಅಥವಾ ಈಶಾನ್ಯ ಭಾಗದಲ್ಲಿ ದೇವರ ಕೋಣೆಯಿರಲಿ.

* ಪೂಜಾ ಕೋಣೆಯಲ್ಲಿ ಇಡುವ ಮೂರ್ತಿ 18 ಇಂಚುಗಳಿಗಿಂತ ಹೆಚ್ಚು ಎತ್ತರ ಇರಬಾರದು. ನೀರು ಸಂಗ್ರಹ ಮಾಡಲು ತಾಮ್ರದ ಪಾತ್ರೆ ಬಳಸಿದರೆ ಒಳ್ಳೆಯದು.

* ಈ ಕೋಣೆಯ ಗೋಡೆ ಬಣ್ಣ ಬಿಳಿ, ನಿಂಲೆ ಅಥವಾ ತಿಳಿ ನೀಲಿ ಬಣ್ಣದಲ್ಲಿರಬೇಕೆ ಮತ್ತು ಅಮೃತಶಿಲೆಯೂ ಬಿಳಿಯಾಗಿರಬೇಕು ಎನ್ನುತ್ತದೆ ವಾಸ್ತು.

* ದೇವರಕೋಣೆಯನ್ನು ಶುಚಿಯಾಗಿ ಇರಿಸಿಕೊಳ್ಳುವುದು ಅಗತ್ಯ. ಕೈ, ಕಾಲುಗಳನ್ನು ತೊಳೆಯದೇ ಒಳಗೆ ಹೋಗಬಾರದು ಎಂಬ ನಂಬಿಕೆ ಇದೆ.

* ದೇವರ ಸಾಮಾಗ್ರಿಗಳನ್ನು ಇರಿಸಲು ಮಾಡಿರುವ ಸ್ಥಳದಲ್ಲಿ ಅನಗತ್ಯ ವಸ್ತುಗಳನ್ನು ಇರಿಸಕೂಡದು.

ಕೃಪೆ: myvaastu

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.