ADVERTISEMENT

ಹೀಗಿರಲಿ ಮನೆಯ ಕಿಟಕಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 12:41 IST
Last Updated 16 ಜೂನ್ 2018, 12:41 IST
ಹೀಗಿರಲಿ ಮನೆಯ ಕಿಟಕಿ
ಹೀಗಿರಲಿ ಮನೆಯ ಕಿಟಕಿ   

ಮನೆಯ ವಾಸ್ತುವಿನಲ್ಲಿ ಕಿಟಕಿಗಳಿಗೂ ಪ್ರಾಧಾನ್ಯತೆ ಇದೆ. ಕಿಟಕಿಗಳು ಸರಿಯಾದ ಸ್ಥಾನದಲ್ಲಿರುವುದರಿಂದ ಮನೆಗೆ ಒಳಿತಿನ ಅಂಶ ಪ್ರವಹಿಸುತ್ತವೆ. ಕಿಟಕಿ ಇಡಬೇಕಾದರೆ ಅನುಸರಿಸಬೇಕಾದ ಕೆಲವು ವಾಸ್ತು ಸೂತ್ರಗಳು ಇಲ್ಲಿವೆ.

* ಬಾಗಿಲಿಗೆ ಎದುರಾಗಿ ಕಿಟಕಿಗಳು ಇರಲಿ. ಇದರಿಂದ ಮನೆಯಲ್ಲಿ ಒಳಿತಿನ ಪ್ರಭಾವ ತುಂಬಿಕೊಳ್ಳುತ್ತದೆ. ಮನೆಯ ಯಾವುದೇ ವಸ್ತು ಅಥವಾ ಬಾಗಿಲು ವಾಸ್ತುಪ್ರಕಾರ ಸರಿ ಇಲ್ಲ ಎಂದಾದರೆ ಕಿಟಕಿಗಳ ಸ್ಥಾನ ಬದಲಾಯಿಸಬೇಕಾಗುತ್ತದೆ.

* ಕಿಟಕಿಯ ಎದುರಿಗೆ ಯಾವುದೇ ತಡೆ ಇರಬಾರದು. ಇದು ವಾಸ್ತು ಪ್ರಕಾರ ಸಮರ್ಪಕವೂ ಹೌದು ಇದರಿಂದ ಗಾಳಿ ಬೆಳಕು ಸುಲಭವಾಗಿ ಪ್ರವಹಿಸುವಂತಾಗುತ್ತದೆ.

ADVERTISEMENT

* ಉತ್ತರ ಮತ್ತು ಪೂರ್ವ ಭಾಗದ ಗೋಡೆಗೆ ಇಡುವ ಕಿಟಕಿ ಎತ್ತರವಾಗಿ ಮತ್ತು ಅಗಲವಾಗಿರಲಿ. ಉತ್ತರ ಭಾಗದಿಂದ ಬರುವ ಗಾಳಿ ಬೆಳಕು ಮನೆ ತುಂಬಿದರೆ ಒಳ್ಳೆಯದು.

* ನೈರುತ್ಯ ಭಾಗದಲ್ಲಿ ಕಿಟಕಿ ಇಡುವುದು ಬೇಡ. ಆ ದಿಕ್ಕಿನಲ್ಲಿ ಕಿಟಕಿ ಇಡುವುದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ.

* ಮನೆಯಲ್ಲಿನ ಒಟ್ಟು ಕಿಟಕಿಗಳ ಸಂಖ್ಯೆಯ ಬಗ್ಗೆಯೂ ಜಾಗೃತೆ ವಹಿಸಬೇಕು. ಕಿಟಕಿಗಳು ಸಮ ಸಂಖ್ಯೆಯಲ್ಲಿಯೇ (2,4,6,8) ಇರಲಿ. ಬೆಸ ಸಂಖ್ಯೆ(1,3,5,7,9) ಬೇಡ.

* ವಾಯುವ್ಯ ಮತ್ತು ಆಗ್ನೇಯ ಭಾಗದಲ್ಲಿ ಸಣ್ಣ ಕಿಟಕಿಗಳಿರಲಿ, ಪಶ್ವಿಮ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಯಾವುದೇ ಕಿಟಕಿಗಳು ಬೇಡ. ಇದರಿಂದ ಋಣಾತ್ಮಕ ಪರಿಣಾಮ ಉಂಟಾಗುತ್ತದೆ.

* ಕಿಟಕಿಗಳಿಗೆ ಬಳಸುವ ಕರ್ಟನ್‍ಗಳ ಬಣ್ಣ ಮನೆ ಮಾಲೀಕರ ರಾಶಿಗೆ ಹೊಂದಿಕೆ ಆಗುವಂತಿರಲಿ.

* ಕಿಟಕಿಯ ಮೇಲೆ ಯಾವುದೇ ದೇವರ ಚಿತ್ರಗಳು, ಹಿರಿಯರ ಚಿತ್ರಗಳನ್ನು ಹಾಕುವುದು ಬೇಡ.

* ಕಿಟಕಿಗಳು ಸಾಂಪ್ರದಾಯಿಕ ಶೈಲಿಯಲ್ಲಿಯೇ ಇರಲಿ. ಆಧುನಿಕ ಶೈಲಿಯ ಕಿಟಕಿಗಳು ಮಂಗಳಕರವಲ್ಲ.

* ಮುರಿದ ಅಥವಾ ಬಿರುಕುಬಿಟ್ಟ ಕಿಟಕಿಗಳನ್ನು ಬೇಗ ಬದಲಿಸಿ. ಇವು ಕೆಟ್ಟ ಶಕುನ.

* ತೆರೆಯುವಾಗ ಮುಚ್ಚುವಾಗ ಶಬ್ದ ಮಾಡುವ ಕಿಟಕಿಗಳನ್ನೂ ಬೇಗ ರಿಪೇರಿ ಮಾಡಿಸಿ. ಇಂಥ ಕಿಟಕಿಗಳಿರುವ ಮನೆಯಲ್ಲಿ ಜಗಳ ಹೆಚ್ಚು.
(ಮಾಹಿತಿ: ಶುಭ ವಾಸ್ತು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.