ಬೆಂಗಳೂರು: ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಅವ್ಯವಸ್ಥೆಗಳ ಕುರಿತುಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ಜೊತೆಗೆ ಆರೋಗ್ಯ ಸಚಿವರೂ ಇತ್ತ ಗಮನಹರಿಸಬೇಕು. ಕೇಂದ್ರಗಳಿಗೆ ಚಿಕಿತ್ಸೆ ನೀಡುವ ಮೂಲಕ ಜನರ ಆರೋಗ್ಯ ರಕ್ಷಣೆಯ ಭರವಸೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ನಗರದ ಸಮಸ್ಯೆಗಳನ್ನು ಸವಿಸ್ತಾರವಾಗಿ ಬಿಂಬಿಸಲು ‘ಪ್ರಜಾವಾಣಿ’ ಆರಂಭಿಸಿರುವ ‘ನಮ್ಮನಗರ,ನಮ್ಮಧ್ವನಿ’ ಮಾಲಿಕೆಯ ನಾಲ್ಕನೇ ಕಂತಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕುರಿತು ಭಾನುವಾರದ ಸಂಚಿಕೆಯಲ್ಲಿ ಪ್ರಕಟವಾದ ‘ಆಯುಕ್ತರೇ ಇಲ್ಲೇ ಟ್ರೀಟ್‌ಮೆಂಟ್ ತಗೋತೀರಾ?’ ವಿಸ್ತೃತ ವರದಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಈ ವರದಿಯ ಕುರಿತು ಓದುಗರು ಕಳುಹಿಸಿರುವ ಪ್ರತಿಕ್ರಿಯೆಗಳಲ್ಲಿ ಆಯ್ದ ಕೆಲವು ಅಭಿಪ್ರಾಯಗಳು ಇಲ್ಲಿವೆ.
‘ಆರೋಗ್ಯ ಸ್ಥಾಯಿ ಸಮಿತಿ ಕೋಮಾದಲ್ಲಿದೆ’
ಜನರ ಆರೋಗ್ಯ ಕಾಪಾಡಬೇಕಾದಮಹಾನಗರ ಪಾಲಿಕೆಯ ಪ್ರಾಥಮಿಕ ಆರೋಗ್ಯಕೇಂದ್ರಗಳು ರೋಗಗ್ರಸ್ತವಾಗಿವೆ. ಅವುಗಳಿಗೆಮೇಜರ್ ಸರ್ಜರಿಯ ಅಗತ್ಯವಿದೆ.ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಕೋಮಾದಲ್ಲಿದೆ. ಸಿಬ್ಬಂದಿ ಉದಾಸೀನತೆ ತೋರಿಸುತ್ತಾರೆ. ಸಂಬಂಧಿಸಿದ ಸಚಿವರು ಹಾಗೂ ಪಾಲಿಕೆ ಆಯುಕ್ತರು ಇತ್ತಗಮನ ಹರಿಸಬೇಕು.
ರುದ್ರೇಶ್ ಅದರಂಗಿ,ಬೆಂಗಳೂರು
‘ಸಮಸ್ಯೆ ಅರ್ಥೈಸಿಕೊಳ್ಳಲಿ’
ಖಾಸಗಿ ಆಸ್ಪತ್ರೆಗೆ ತೆರಳಲು ಶಕ್ತರಲ್ಲದ ಮಧ್ಯಮ ವರ್ಗದ ಜನ ಚಿಕಿತ್ಸೆಗಾಗಿಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅವಲಂಬಿಸಿರುತ್ತಾರೆ. ಅವ್ಯವಸ್ಥೆಯ ಕಾರಣ ಅಲ್ಲಿ ಅವರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ‘ಪ್ರಜಾವಾಣಿ’ಯ ವರದಿ ಓದಿದ ಬಳಿಕವಾದರೂ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ಅವುಗಳ ಪರಿಹಾರಕ್ಕೆ ಮುಂದಾಗಲಿ.
ಎ.ವಿ.ಶ್ಯಾಮರಾವ್,ರಾಮಮೂರ್ತಿನಗರ
‘ಅಧಿಕಾರಿಗಳು ಚಿಂತಿಸಲಿ’
ನಮ್ಮ ನಗರ, ನಮ್ಮ ಧ್ವನಿ ಸಮಗ್ರ ವರದಿಯಲ್ಲಿಆರೋಗ್ಯ ಕೇಂದ್ರಗಳ ದುಃಸ್ಥಿತಿಯನ್ನು ಚಿತ್ರ ಸಹಿತವಾಗಿ ಚೆನ್ನಾಗಿ ವಿವರಿಸಲಾಗಿದೆ. ಈ ವರದಿಯಿಂದಲಾದರೂ, ಬಡವರು ನಮ್ಮಂತೆಯೇ ಮನುಷ್ಯರು ಅವರಿಗೂ ಮೂಲಸೌಕರ್ಯದ ಅಗತ್ಯವಿದೆ ಎಂದು ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳು ಯೋಚಿಸುವಂತಾಗಲಿ.
ಪುಷ್ಪಾ ಶ್ರೀರಾಮ್, ಪ್ಯಾಲೇಸ್ ಗುಟ್ಟಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.