ಬೆಂಗಳೂರು: ‘ಕೇಂದ್ರ ಸಚಿವ ಅನಂತಕುಮಾರ್ ವಿವಿಧಕಾರ್ಯಭಾರಗಳ ಒತ್ತಡದಲ್ಲಿಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸಿದರೆ?’ ಇಂಥದ್ದೊಂದು ಪ್ರಶ್ನೆ ಇದೀಗ ಅವರ ಅಭಿಮಾನಿಗಳನ್ನು ಕಾಡುತ್ತಿದೆ.ಶ್ವಾಸಕೋಶದ ಕ್ಯಾನ್ಸರ್ (ಅಡೆನೊಕಾರ್ಸಿನೊಮಾ) ಪತ್ತೆಯಾದ ಆರು ತಿಂಗಳಲ್ಲಿ ಅನಂತಕುಮಾರ್ ಮೃತಪಟ್ಟಿದ್ದಾರೆ.
ಅನಂತಕುಮಾರ್ ಅವರ ಆತ್ಮೀಯ ಗೆಳೆಯರೂ ಆಗಿದ್ದಶಂಕರ ಕ್ಯಾನ್ಸರ್ ಆಸ್ಪತ್ರೆಯ ವೈದ್ಯ ಡಾ.ಬಿ.ಎಸ್.ಶ್ರೀನಾಥ್ ‘ಅನಂತಕುಮಾರ್ ರೋಗಲಕ್ಷಣಗಳನ್ನು ನಿರ್ಲಕ್ಷಿಸಿದ್ದರು. ತಮಗೆ ಬಂದಿರುವ ಕೆಮ್ಮಿಗೆ ವಿಧಾನಸಭೆ ಚುನಾವಣೆಯ ಒತ್ತಡ ಕಾರಣ ಎಂದು ನಂಬಿದ್ದರು’ ಎಂದು ಹೇಳುತ್ತಾರೆ.
‘ಅನಂತಕುಮಾರ್ ಅವರಿಗೆಸಕ್ಕರೆ ಕಾಯಿಲೆ ಹೊರತುಪಡಿಸಿ ಯಾವುದೇ ಅನಾರೋಗ್ಯ ಸಮಸ್ಯೆ ಇರಲಿಲ್ಲ.ಯಾವುದೇ ದುಶ್ಚಟಗಳೂ ಇರಲಿಲ್ಲ. ಅವರ ಜೀವನಶೈಲಿಯೂ ಚೆನ್ನಾಗಿತ್ತು. ಬಹುಶಃ ಅವರಿಗೆ ಇದೇ ಜನವರಿ ಅಥವಾ ಫೆಬ್ರುವರಿಯಲ್ಲಿ ಕ್ಯಾನ್ಸರ್ ಬಂದಿರಬಹುದು. ಆದರೆ ಅದು ಪತ್ತೆಯಾಗಿದ್ದು ಮಾತ್ರ ಜೂನ್‌ನಲ್ಲಿ. ಅಷ್ಟುಹೊತ್ತಿಗೆ ಕ್ಯಾನ್ಸರ್ ಗಂಭೀರ ಸ್ವರೂಪ ಪಡೆದುಕೊಂಡಿತ್ತು (ಅಡ್ವಾನ್ಡ್ ಸ್ಟೇಜ್)’ ಎಂದು ತಿಳಿಸಿದರು.
‘ಕ್ಯಾನ್ಸರ್ ಬಹುಬೇಗ ಅವರನ್ನು ಆವರಿಸಿತು. ಚೇತರಿಸಿಕೊಳ್ಳಲು ಸಮಯಕೊಡಲಿಲ್ಲ.ವಿಷಯ ಗೊತ್ತಾದ ನಂತರ ಅನಂತಕುಮಾರ್ ಆಘಾತಕ್ಕೆ ಒಳಗಾಗಿದ್ದರು. ಹೊರಜಗತ್ತಿಗೆ ತಿಳಿಸಬಾರದು,ಖಾಸಗಿಯಾಗಿ ಇರಿಸಬೇಕು ಎಂದು ಬಯಸಿದ್ದರು. ಅವರ ಕುಟುಂಬದ ಸದಸ್ಯರೂ ರೋಗದ ಮಾಹಿತಿಯನ್ನು ಬಹಿರಂಗಪಡಿಸಲು ಒಪ್ಪಿರಲಿಲ್ಲ’ ಎಂದು ನುಡಿದರು.
‘ನ್ಯೂಯಾರ್ಕ್‌ನ ಮೆಮೊರಿಯಲ್ ಸ್ಲೋನ್ ಕೆಟ್ಟೆರಿಂಗ್ ಕ್ಯಾನ್ಸರ್ ಸೆಂಟರ್‌ನಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಲು ಅನಂತಕುಮಾರ್ ಯತ್ನಿಸಿದರು. ಆದರೆ ಅಲ್ಲಿ ಪಡೆದ ಚಿಕಿತ್ಸೆಅಡ್ಡಪರಿಣಾಮ ಬೀರಿತ್ತು. ಹೀಗಾಗಿ ಅನಂತಕುಮಾರ್ ಮತ್ತು ಅವರ ಕುಟುಂಬ ಬೆಂಗಳೂರಿಗೆ ಮರಳಿತು’ ಎಂದು ನೆನಪಿಸಿಕೊಂಡರು.
‘ಶಂಕರ ಆಸ್ಪತ್ರೆಯಲ್ಲಿದ್ದ ಅನಂತಕುಮಾರ್ ಬೆಂಗಳೂರು ಮತ್ತು ಭಾರತದ ಪ್ರಗತಿಗಾಗಿ ರೂಪಿಸಿದ್ದ ತಮ್ಮ ಕನಸಿನ ಯೋಜನೆಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ಅವರ ಸಾವು ಕೇವಲ ಅವರ ಕುಟುಂಬಕ್ಕೆ ಮಾತ್ರವಲ್ಲ,ದೇಶಕ್ಕೇದೊಡ್ಡ ನಷ್ಟ’ ಎಂದುಅನಂತಕುಮಾರ್ ಅವರ ಆಪ್ತಮಿತ್ರರೂ ಆಗಿದ್ದಡಾ.ಶ್ರೀನಾಥ್ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.