ADVERTISEMENT

ಜಯಂತ ಕಾಯ್ಕಿಣಿ ಅವರ ಜೊತೆ ಮಾತುಕತೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 11:09 IST
Last Updated 28 ಫೆಬ್ರುವರಿ 2019, 11:09 IST

ಓದುಗರ ಮನೋಬೀದಿಯಲ್ಲಿ ಸದಾ ಓಡಾಡಿಕೊಂಡಿರುವ ಹಲವು ಪಾತ್ರಗಳನ್ನು ಸೃಷ್ಟಿಸಿದ ಕನ್ನಡದ ಬಹುಮುಖ್ಯ ಕತೆಗಾರ, ಕವಿ ಜಯಂತ ಕಾಯ್ಕಿಣಿ. ಬರೀ ಓಡಾಡಿಕೊಂಡಿರುವುದಷ್ಟೇ ಅಲ್ಲ, ಆ ಚಲನೆಯ ಮೂಲಕವೇ ಚೈತನ್ಯಶೀಲತೆಯನ್ನೂ, ಅದೇ ಬದುಕನ್ನು ಹೊಸತಾಗಿ ನೋಡುವ ದೃಷ್ಟಿಕೋನವನ್ನೂ ಅವರ ಕೃತಿಗಳು ಓದುಗರಿಗೆ ದಯಪಾಲಿಸುತ್ತ ಬಂದಿವೆ.

ಇತ್ತೀಚೆಗೆ ತೇಜಸ್ವಿನಿ ನಿರಂಜನ ಇಂಗ್ಲಿಷಿಗೆ ಅನುವಾದಿಸಿದ ಜಯಂತ ಅವರ ಹದಿನಾರು ಕತೆಗಳ ಸಂಕಲನ ‘ನೋ ಪ್ರೆಸೆಂಟ್ಸ್‌ ಪ್ಲೀಸ್‌’ಗೆ ದಕ್ಷಿಣ ಏಷ್ಯಾದ ಪ್ರತಿಷ್ಠಿತ ಡಿಎಸ್‌ಸಿ ಪ್ರಶಸ್ತಿಯೂ ಸಂದಿದೆ.

ಕನ್ನಡಕ್ಕೆ, ಅದೂ ಅನುವಾದ ಕೃತಿಗೆ ಮೊದಲ ಬಾರಿಗೆ ಈ ಪುರಸ್ಕಾರ ಸಿಗುತ್ತಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಕನ್ನಡದ ಸಣ್ಣಕತೆಗಳನ್ನು ಮೆರೆಸಿದ ಜಯಂತ ಕಾಯ್ಕಿಣಿ ಅವರ ಜತೆಗೆ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.