ಕೋವಿಡ್ ಲಸಿಕೆ ಪಡೆದವರ ಪ್ರತಿಕ್ರಿಯೆಯನ್ನು ಸರ್ಕಾರ ಕೇಳುತ್ತಿದೆ. ಇದಕ್ಕಾಗಿ 912250041117 ಸಂಖ್ಯೆಯಿಂದ ಕರೆ ಬರುತ್ತಿದೆ. ಈ ಸಂಖ್ಯೆಯಿಂದ ಬರುವ ಕರೆ ನಕಲಿ ಎಂದು ವ್ಯಾಟ್ಸ್‌ಆ್ಯಪ್‌ನಲ್ಲಿ ಬರುತ್ತಿರುವ ಫಾರ್ವರ್ಡೆಡ್ ಸಂದೇಶವೊಂದು ತಿಳಿಸಿದೆ. ‘ನನ್ನ ಸ್ನೇಹಿತನಿಗೆ ಈ ಸಂಖ್ಯೆಯಿಂದ ಕರೆ ಬಂದಿತು. ಲಸಿಕೆ ಹಾಕಿಸಿಕೊಂಡಿದ್ದರೆ 1ನ್ನು ಒತ್ತಿ ಎಂದು ತಿಳಿಸಲಾಯಿತು. ಅವನು 1 ಒತ್ತಿದ ತಕ್ಷಣ ಅವನ ಮೊಬೈಲ್ ಹ್ಯಾಕ್ ಆಯಿತು. ಈ ಸಂಖ್ಯೆಯಿಂದ ಕರೆ ಬಂದರೆ ಜಾಗರೂಕರಾಗಿರಿ’ ಎಂದು ಆ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.
ವ್ಯಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿರುವ ಲಸಿಕೆ ಕುರಿತ ಸಂದೇಶದ ಬಗ್ಗೆ ಪಿಐಬಿ ಫ್ಯಾಕ್ಟ್ ಚೆಕ್ ಪರಿಶೀಲನೆ ನಡೆಸಿ, ಎರಡು ವಿಚಾರಗಳನ್ನು ಸ್ಪಷ್ಟಪಡಿಸಿದೆ. ಮೊದಲನೆಯದಾಗಿ ಈ ಸಂಖ್ಯೆಯಿಂದ ಬರುವ ಕರೆ ಮೋಸದ್ದು. ಎರಡನೆಯದಾಗಿ ಕೇಂದ್ರ ಸರ್ಕಾರವು ಲಸಿಕೆ ಪಡೆದವರ ಪ್ರತಿಕ್ರಿಯೆ ಕೇಳಲು ‘1921’ ಎಂಬ ಅಧಿಕೃತ ಸಂಖ್ಯೆಯನ್ನು ಬಳಸುತ್ತಿದೆ. ಹೀಗಾಗಿ ಮೋಸದ ಬಲೆಗೆ ಬೀಳದಿರಿ ಎಂದು ಜನರನ್ನು ಎಚ್ಚರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.