ADVERTISEMENT

FACT CHECK: ದಾರುಲ್ ಉಲೂಂ ದೇವಬಂದ್ ಹೆಸರಿನಲ್ಲಿ ಫತ್ವಾ!

ಪ್ರಜಾವಾಣಿ ವಿಶೇಷ
Published 14 ಜೂನ್ 2022, 20:30 IST
Last Updated 14 ಜೂನ್ 2022, 20:30 IST
   

‘ರಾಸಾಯನಿಕಗಳನ್ನು ಬೆರೆಸಿರುವ ಆಹಾರವನ್ನು ಹಿಂದೂಗಳಿಗೆ ಮಾರಾಟ ಮಾಡಿ. ಇಂತಹ ಆಹಾರ ಸೇವಿಸಿದ ಹಿಂದೂಗಳು ಕಾಯಿಲೆ ಬೀಳುತ್ತಾರೆ’ ಎಂಬ ಅರ್ಥದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಈ ಸಂದೇಶವನ್ನು ಮುಸ್ಲಿಮರಿಗೆ ನೀಡಲಾಗಿದೆ. ದೇಶದ ಅತಿದೊಡ್ಡ ಮುಸ್ಲಿಂ ಧಾರ್ಮಿಕ ಸಂಸ್ಥೆಯಾದ ದಾರುಲ್ ಉಲೂಂ ದೇವಬಂದ್ ಈ ಕುರಿತಂತೆ ಫತ್ವಾ ಹೊರಡಿಸಿದೆ ಎಂದು ಆರೋಪಿಸಲಾಗಿದೆ.

ಹಿಂದೂಗಳಿಗೆ ರಾಸಾಯನಿಕಯುಕ್ತ ಆಹಾರ ಮಾರಾಟ ಮಾಡುವಂತೆ ಮುಸ್ಲಿಮರಿಗೆ ದಾರುಲ್ ಉಲೂಂ ದೇವಬಂದ್ ಫತ್ವಾ ಹೊರಡಿಸಿಲ್ಲ ಎಂದು ಫ್ಯಾಕ್ಟ್ಲಿ ವೆಬ್‌ತಾಣ ವರದಿ ಮಾಡಿದೆ. 2020ರಲ್ಲೂ ಇದೇ ರೀತಿಯ ಫತ್ವಾ ಹೊರಡಿಸಿರುವ ಬಗ್ಗೆ ಚರ್ಚೆಯಾಗಿತ್ತು. ದಾರುಲ್ ಉಲೂಂ ದೇವಬಂದ್ ಹೆಸರಿನಲ್ಲಿ ನಕಲಿ ಫತ್ವಾ ಹೊರಡಿಸಲಾಗಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಬಾರಿ, ಗಾಯುರ್ ಶೇಖ್ ಎಂಬುವರ ಹೆಸರಿನಲ್ಲಿ ಮಾಡಲಾಗಿರುವ ಫತ್ವಾ ಕುರಿತ ಟ್ವೀಟ್ ಅಧಿಕೃತವಲ್ಲ ಎಂದು ಉಲೂಂ ಸ್ಪಷ್ಟಪಡಿಸಿದೆ. ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲೂ ಫತ್ವಾ ಬಗ್ಗೆ ಮಾಹಿತಿ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT