ಮುಸ್ಲಿಮರು ರಸ್ತೆಯೊಂದರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಹಿಂದೂಗಳು ದೀಪಾವಳಿಯಲ್ಲಿ ರಸ್ತೆಯಲ್ಲಿ ಪಟಾಕಿ ಸಿಡಿಸಬೇಡಿ ಎಂದು ಅಮೀರ್ ಖಾನ್ ಹೇಳುತ್ತಾರೆ. ಆದರೆ ಪ್ರಾರ್ಥನೆಗಾಗಿ ರಸ್ತೆಯನ್ನು ಬಂದ್ ಮಾಡಬಾರದು ಎಂದು ಅವರು ಮುಸ್ಲಿಮರಿಗೆ ಹೇಳುತ್ತಾರೆಯೇ? ಅಮೀರ್ ಅದನ್ನು ಹೇಳುವುದಿಲ್ಲ. ಏಕೆಂದರೆ ನಿಜವಾಗಿಯೂ ಅಸಹಿಷ್ಣುಗಳು ಯಾರು ಎಂಬುದು ಅವರಿಗೆ ಗೊತ್ತಿದೆ’ ಎಂಬ ವಿವರ ಇರುವ ಟ್ವೀಟ್‌ಗಳು ಮತ್ತು ಫೇಸ್‌ಬುಕ್ ಪೋಸ್ಟ್‌ಗಳು ವೈರಲ್ ಆಗಿವೆ. ‘ನೋಡಿ, ಭಾರತದಲ್ಲಿ ಮುಸ್ಲಿಮರು ಹೇಗೆ ರಸ್ತೆಯನ್ನು ಬಂದ್ ಮಾಡುತ್ತಾರೆ’ ಎಂದೂ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಇದು ಭಾರತದಲ್ಲಿ ತೆಗೆಯಲಾದ ಚಿತ್ರವಲ್ಲ. ಬಾಂಗ್ಲಾದೇಶದ ರಾಜಧಾನಿ ಢಾಕಾದ ಸೋಭನ್‌ಬಾಗ್ ಮಸೀದಿಯಲ್ಲಿ ರಂಜಾನ್ ಮಾಸಾಚರಣೆ ವೇಳೆ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದ ಚಿತ್ರವದು. 2021ರ ಏಪ್ರಿಲ್ 30ರಂದು ದಿ ಗಾರ್ಡಿಯನ್ ಪತ್ರಿಕೆ ಈ ಚಿತ್ರವನ್ನು ಪ್ರಕಟಿಸಿತ್ತು. ಮುನೀರುಲ್ ಆಲಂ ಎಂಬುವವರು ಈ ಚಿತ್ರವನ್ನು ತೆಗೆದಿದ್ದಾರೆ. ಆದರೆ ಈ ಚಿತ್ರವನ್ನು ಬಳಸಿಕೊಂಡು, ಭಾರತದಲ್ಲಿ ಮುಸ್ಲಿಮರು ರಸ್ತೆ ಬಂದ್ ಮಾಡಿ ಪ್ರಾರ್ಥನೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ’ ಎಂದು ದಿ ಲಾಜಿಕಲ್ ಇಂಡಿಯನ್,ಫ್ಯಾಕ್ಟ್‌ಚೆಕ್ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.