ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ₹1.5 ಕೋಟಿ ಬೆಲೆಬಾಳುವ ಮರ್ಸಿಡೀಸ್ ಬೆಂಜ್ ಕಾರು ಬಳಸುತ್ತಿದ್ದಾರೆ. ರೈತರೊಬ್ಬರು ಕಾರಿನ ಮೇಲೆ ಕುಳಿತು ಪೇಪರ್ ಓದುತ್ತಿರುವ ಚಿತ್ರ ವೈರಲ್ ಆಗಿದೆ. ಶ್ರೀಮಂತಪ್ರತಿಭಟನಾಕಾರರು ನಡೆಸುತ್ತಿರುವ ಚಳುವಳಿ ನ್ಯಾಯಸಮ್ಮತವಲ್ಲ ಎಂಬ ಪುಕಾರು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿದೆ.
ಈ ಬಗ್ಗೆ ಆಲ್ಟ್ ನ್ಯೂಸ್ ಪರಿಶೀಲನೆ ನಡೆಸಿದಾಗ ಆನಂದಪುರದ ರೈತ ಮನ್‌ಪ್ರೀತ್ ಸಿಂಗ್ ಎಂಬುವರಿಗೆ ಈ ಕಾರು ಸೇರಿದೆ ಎಂಬುದು ತಿಳಿದುಬಂದಿದೆ. ಕಾರಿನ ಸಂಖ್ಯೆ ಹಿಡಿದು ‘ವಾಹನ್’ ಪೋರ್ಟಲ್‌ನಲ್ಲಿ ಪರಿಶೀಲಿಸಿದಾಗ ಅದು ಬೆಂಜ್ ಕಂಪನಿಯದ್ದಲ್ಲ ಎಂಬುದು ಗೊತ್ತಾಗಿದೆ. ಫೋರ್ಸ್ ಮೋಟರ್ಸ್‌ನ ಎಸ್‌ಯುವಿಯನ್ನು ಬೆಂಜ್ ಜಿ–ಕ್ಲಾಸ್ ಕಾರಿನಂತೆ ಮಾಡಿಫೈಡ್ ಮಾಡಲಾಗಿದೆ. ಈ ವಾಹನದ ಬೆಲೆ ಸುಮಾರು ₹10 ಲಕ್ಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.