‘ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಧಲವೀರ್ ಭಂಡಾರಿ ಅವರು ಅಂತರರಾಷ್ಟ್ರೀಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ಧಾರೆ’ ಎಂದು ಉತ್ತರ ಪ್ರದೇಶ ಬಿಜೆಪಿ ಸಂಘಟನಾ ಕಾರ್ಯದರ್ಶಿ ನಾಗೇಂದ್ರನಾಥ ತ್ರಿಪಾಠಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕಾರಣಕರ್ತರಾದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ಧಾರೆ. ಫೇಸ್‌ಬುಕ್‌ನಲ್ಲಿ ಹಲವರು ಇದನ್ನು ಷೇರ್ ಮಾಡಿದ್ಧಾರೆ.
ಭಂಡಾರಿ ಅವರು ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಮೂರ್ತಿಯಾಗಿ 2017ರಲ್ಲಿ ಮರು ಆಯ್ಕೆಯಾಗಿದ್ದರು ಎಂದು ಹಲವು ಸುದ್ದಿಸಂಸ್ಥೆಗಳು ವರದಿಗಳು ಮಾಹಿತಿ ನೀಡಿವೆ. ಆದರೆ ಮುಖ್ಯನ್ಯಾಯಮೂರ್ತಿಯಾಗಿ ಆಯ್ಕೆಯಾಗಿರುವ ಬಗ್ಗೆ ಯಾವ ಸುದ್ದಿಸಂಸ್ಥೆಯೂ ಉಲ್ಲೇಖಿಸಿಲ್ಲ. ಐಸಿಜೆಯಲ್ಲಿ ಮುಖ್ಯನ್ಯಾಯಮೂರ್ತಿ ಹುದ್ದೆ ಇಲ್ಲ. 15 ಸದಸ್ಯರ ನ್ಯಾಯಾಧೀಶರಲ್ಲಿ ಒಬ್ಬರು ಅಧ್ಯಕ್ಷ ಮತ್ತು ಮತ್ತೊಬ್ಬರು ಉಪಾಧ್ಯಕ್ಷ ಹುದ್ದೆಯಲ್ಲಿದ್ದಾರೆ ಎಂದು ಅಲ್ಟ್ ನ್ಯೂಸ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.