ನವದೆಹಲಿ: ಅಯೋಧ್ಯೆಯಲ್ಲಿ ಧ್ವಂಸವಾಗಿರುವ ಬಾಬರಿ ಮಸೀದಿಯಲ್ಲಿ ನಡೆದ ಕೊನೆಯ ಪ್ರಾರ್ಥನೆ ಎಂಬ ಶೀರ್ಷಿಕೆಯ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ಆಗಿದೆ. ಪಾಕಿಸ್ತಾನದ ಪೇಶಾವರ್ ಮೂಲದ ಶೆರೀನ್ ಎಂಬ ಟ್ವೀಟಿಗರುಈ ಚಿತ್ರವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ,
ಹಲವಾರು ಮಂದಿ ಇದೇ ಚಿತ್ರವನ್ನು ಫೇಸ್‍ಬುಕ್ ಮತ್ತು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.
ಫ್ಯಾಕ್ಟ್‌ಚೆಕ್
ಬಾಬರಿ ಮಸೀದಿಯಲ್ಲಿ ಕೊನೆಯ ಪ್ರಾರ್ಥನೆ ಎಂಬಶೀರ್ಷಿಕೆಯ ಫೋಟೊವನ್ನು ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಮಾಡಿದ್ದುಇದು ಬಾಬರಿಯಲ್ಲಿ ನಡೆದ ನಮಾಜ್ ಚಿತ್ರ ಅಲ್ಲ ಎಂದು ಹೇಳಿದೆ.
ಈ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಇದು 2008ರ ಚಿತ್ರ ಎಂದು ತಿಳಿದು ಬಂದಿದೆ. ಡಿಸೆಂಬರ್ 9, 2008ರಂದು ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಚಿತ್ರ ಇದಾಗಿದೆ. ಈ ಚಿತ್ರ ಕ್ಲಿಕ್ಕಿಸಿದ್ದು ಗುರಿಂದರ್ ಒಸಾನ್. ಅಸೋಸಿಯೇಟೆಡ್ ಪ್ರೆಸ್‌ನಲ್ಲಿ ಲಭ್ಯವಾದ ಈ ಚಿತ್ರದ ಶೀರ್ಷಿಕೆ ಮುಸ್ಲಿಮರು ಈದ್ ಅಲ್ ಅಧಾ ಪ್ರಾರ್ಥನೆ ಸಲ್ಲಿಸುತ್ತಿರುವುದು ಎಂದಿದೆ.
ಅಂದರೆ 11 ವರ್ಷಗಳ ಹಿಂದೆ ಫಿರೋಜ್ ಶಾ ಕೋಟ್ಲಾ ಮಸೀದಿಯಲ್ಲಿ ಮುಸ್ಲಿಮರು ಸಲ್ಲಿಸಿದ ಪ್ರಾರ್ಥನೆಯ ಚಿತ್ರವನ್ನು ಬಾಬರಿ ಮಸೀದಿಯಲ್ಲಿನ ಚಿತ್ರ ಎಂದು ತಪ್ಪಾಗಿ ಶೀರ್ಷಿಕೆ ನೀಡಿ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಶೇರ್ ಮಾಡಿದ್ದಾರೆ,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.