ನವದೆಹಲಿ: ಜಮ್ಮು ಮತ್ತು ಕಾಶ್ಮೀರಲ್ಲಿ ಕೇಂದ್ರ ಸರ್ಕಾರ ಭಾರೀ ಪ್ರಮಾಣದಲ್ಲಿ ಭದ್ರತಾ ಪಡೆ ನಿಯೋಜಿಸಿರುವ ಬೆನ್ನಲ್ಲೇ Live encounter in Kashmir (ಕಾಶ್ಮೀರದಲ್ಲಿ ಲೈವ್ ಕೌಂಟರ್) ಎಂಬ ಶೀರ್ಷಿಕೆಯ ವಿಡಿಯೊವೊಂದುಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
57 ಸೆಕೆಂಡ್ ಅವಧಿಯ ವಿಡಿಯೊ ಇದಾಗಿದ್ದು ಭದ್ರತಾ ಸಿಬ್ಬಂದಿಗಳುಮನೆಯೊಂದರಲ್ಲಿ ಕೂಂಬಿಂಗ್ ಕಾರ್ಯಾಚರಣೆ ಮಾಡುತ್ತಿರುವುದು ಇದರಲ್ಲಿ ಕಾಣಿಸುತ್ತದೆ.ಇಲ್ಲಿ ಅಟ್ಟಾಡಿಸಿಕೊಂಡು ಹೋಗುತ್ತಿರುವ, ಗುಂಡು ಹಾರಿಸುತ್ತಿರುವ ದೃಶ್ಯಗಳಿದ್ದು, ನೆಲದಲ್ಲಿ ಬಿದ್ದಿರುವ ವ್ಯಕ್ತಿಯೊಬ್ಬರ ದೇಹವನ್ನು ಯೋಧರೊಬ್ಬರು ತಪಾಸಣೆ ಮಾಡುತ್ತಿರುವುದು ಕಾಣುತ್ತಿದೆ.ಈ ವಿಡಿಯೊದಲ್ಲಿ ಡಿಡಿ ನ್ಯೂಸ್ ವರದಿಗಾರ್ತಿಯೊಬ್ಬರು ವರದಿ ಮಾಡುತ್ತಿದ್ದು, ವಿಡಿಯೊದ ಎಡಭಾಗದಲ್ಲಿ ಡಿಡಿ ನ್ಯೂಸ್ ಲೋಗೊ ಕೂಡಾ ಇದೆ.
ಇದೇ ವಿಡಿಯೊವನ್ನು ಟ್ವೀಟಿಗ ಸಜೀಶ್ ಸತೀಶನ್ ಎಂಬವರು ಶೇರ್ ಮಾಡಿದ್ದು ಈ ರೀತಿ ಟ್ವೀಟಿಸಿದ್ದಾರೆ.
ಬೆನ್ನುಮೂಳೆ ಇರುವವರು ದೇಶವನ್ನಾಳಿದರೆ ಈ ರೀತಿ ಇರುತ್ತದೆ. ಕಾಶ್ಮೀರದಲ್ಲಿನ ಮನೆಗಳಲ್ಲಿ ಉಗ್ರರನ್ನು ಅಡಗಿಸಿಟ್ಟು, ಅಲ್ಲಿಗೆ ಸೈನಿಕರು ತಪಾಸಣೆಗೆ ಬಂದಾಗ ಮನೆಯವರು ಬೋಲೋ ತಕ್ಬೀರ್ ಎಂದು ಕೂಗಿ ಸೈನಿಕರನ್ನು ತಡೆಯಲು ಯತ್ನಿಸುತ್ತಿದ್ದಾರೆ.ಅವರನ್ನು ದೂರ ಸರಿಸಿ ಮನೆಯಲ್ಲಡಗಿದ್ದ ಉಗ್ರರನ್ನು ಕ್ಷಣದಲ್ಲಿ ಹತ್ಯೆ ಮಾಡುತ್ತಿರುವುದು.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೊ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡಿದ ಆಲ್ಟ್ ನ್ಯೂಸ್, ಭಾರತ ಮತ್ತು ಅಮೆರಿಕದ ಸೈನಿಕರು ಮಿಲಿಟರಿ ಕಸರತ್ತು ನಡೆಸುತ್ತಿರುವ ಹಳೆಯ ವಿಡಿಯೊ ಇದಾಗಿದೆ.ಈ ಹಳೆ ವಿಡಿಯೊವನ್ನು ಪೋಸ್ಟ್ ಮಾಡಿದ ನೆಟ್ಟಿಗರು ಕಾಶ್ಮೀರದಲ್ಲಿ ನಡೆಯುತ್ತಿರುವ ಲೈವ್ ಎನ್‌ಕೌಂಟರ್ ಎಂದು ಶೀರ್ಷಿಕೆ ನೀಡಿದ್ದಾರೆ ಎಂದಿದೆ.
ಫ್ಯಾಕ್ಟ್‌ಚೆಕ್
ವಿಡಿಯೊದಲ್ಲಿ ಡಿಡಿ ನ್ಯೂಸ್ ಲೋಗೊ ಇರುವ ಕಾರಣ ಆಲ್ಟ್ ನ್ಯೂಸ್, ಡಿಡಿ ನ್ಯೂಸ್ ಚಾನೆಲ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೊ ಬಗ್ಗೆಹುಡುಕಾಟ ನಡೆಸಿದೆ.ಆಗ Know how Indian Army carries out search operations in Kashmir valley ಎಂಬ ವಿಡಿಯೊ ಸಿಕ್ಕಿದ್ದು ಇದುಅಕ್ಟೋಬರ್ 25, 2016ರಲ್ಲಿ ಅಪ್‌ಲೋಡ್ ಮಾಡಿದ್ದಾಗಿದೆ.
ಉಗ್ರರು ನಿರ್ದಿಷ್ಟ ಪ್ರದೇಶವೊಂದರಲ್ಲಿ ಅಡಗಿದ್ದಾರೆ ಎಂದ ಗುಪ್ತಚರ ಮಾಹಿತಿ ಪ್ರಕಾರಭಾರತೀಯ ಸೇನೆ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿರುವುದನ್ನು ಡಿಡಿ ನ್ಯೂಸ್ ವಿಶೇಷ ವರದಿ ಮಾಡಿದೆ.ಈ ವಿಡಿಯೊದಲ್ಲಿರುವ ವರದಿಗಾರ್ತಿ ಬಗ್ಗೆ ಹುಡುಕಿದಾಗ ಈಕೆಯ ಹೆಸರು ನಂದಿತಾ ದಗಾರ್ ಎಂದು ತಿಳಿದು ಬಂದಿದೆ. ಸೆಪ್ಟೆಂಬರ್ 25, 2016 ರ ಟ್ವೀಟ್‍ವೊಂದರಲ್ಲಿ ಈ ವರದಿಗಾರ್ತಿಯ ಫೋಟೊ ಇದೆ. ವಿಡಿಯೊದಲ್ಲಿ ಆಕೆ ವರದಿಗಾರಿಕೆ ಮಾಡುವಾಗ ತೊಟ್ಟಿದ್ದ ಅದೇ ಉಡುಪು ಈ ಫೊಟೊದಲ್ಲಿದೆ. ಆ ಟ್ವೀಟ್ ಪ್ರಕಾರ ಇಂಡೊ- ಅಮೆರಿಕ ಜಂಟಿ ಮಿಲಿಟರಿ ತರಬೇತಿ ಯುದ್ಧ್ ಅಭ್ಯಾಸ್ ವೇಳೆ ತೆಗೆದ ಫೋಟೊ ಇದಾಗಿದೆ.
ಏನಿದು ಯುದ್ಧ್ ಅಭ್ಯಾಸ್ ?
ಯುಎಸ್ ಆರ್ಮಿ ಪೆಸಿಫಿಕ್ ಸಹಯೋಗ ಕಾರ್ಯಕ್ರಮದ ಅಂಗವಾಗಿ 2004ರಲ್ಲಿ ಯುದ್ಧ್ ಅಭ್ಯಾಸ್ ಆರಂಭವಾಗಿತ್ತು. ಉಗ್ರರ ಒಳನುಸುಳುವಿಕೆ ಮತ್ತು ಉಗ್ರ ನಿಗ್ರಹ ಕಾರ್ಯಾಚರಣೆ ಮಾಡುವ ಉದ್ದೇಶ ಹೊಂದಿರುವ ಯುದ್ಧ್ ಅಭ್ಯಾಸ್ 2016 ಎಂಬ ತರಬೇತಿ ಕಾರ್ಯಕ್ರಮಸೆಪ್ಟೆಂಬರ್ 15, 2016ರಂದು ಆರಂಭವಾಗಿತ್ತು. ಉತ್ತರಾಖಂಡದ ರಾಣೀಖೇತ್‌ನಲ್ಲಿರುವ ತೌಬಟ್ಟಿಯಾ ಮಿಲಿಟರಿ ಕೇಂದ್ರದಲ್ಲಿ ಈ ತರಬೇತಿ ನಡೆದಿತ್ತು.
ಇದೀಗ ಕಾಶ್ಮೀರದಲ್ಲಿ ಲೈವ್ ಎನ್‌ಕೌಂಟರ್ ಎಂಬ ಶೀರ್ಷಿಕೆಯಲ್ಲಿ ಹರಿದಾಡುತ್ತಿರುವುದು ಸೆಪ್ಟೆಂಬರ್ 2016ರಲ್ಲಿ ಚಿತ್ರೀಕರಿಸಲಾದ ಇಂಡೋ- ಅಮೆರಿಕ ಜಂಟಿ ತರಬೇತಿಯ ವಿಡಿಯೊ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.