ADVERTISEMENT

ಬೆಂಗಳೂರಿನ ಮೋದಿ ಮಸೀದಿಗೆ ಈ ಹೆಸರು ಬಂದಿದ್ದು ಪ್ರಧಾನಿ ಮೋದಿಯಿಂದಲ್ಲ!

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 14:49 IST
Last Updated 21 ಜೂನ್ 2019, 14:49 IST
   

ಬೆಂಗಳೂರು: ಬೆಂಗಳೂರಿನಲ್ಲಿರುವ ಮುಸ್ಲಿಮರು ಮಸೀದಿಯೊಂದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಟ್ಟಿದ್ದಾರೆ.ಇದನ್ನು ನೋಡಿ ಎಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೋ ಎಂಬ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಮೋದಿ ಮಸೀದಿಯ ನಾಮಫಲಕ ಮತ್ತು ಮೋದಿ ಇಸ್ಲಾಮಿಕ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಫ್ಲೆಕ್ಸ್ ಅಂಟಿಸಿರುವ ಮಸೀದಿಯ ಒಳಾಂಗಣದ ಚಿತ್ರವನ್ನು ಈ ಟ್ವೀಟ್‌ನೊಂದಿಗೆ ಲಗತ್ತಿಸಲಾಗಿದೆ. ಆದರೆ ಬೆಂಗಳೂರಿನಲ್ಲಿರುವ ಮೋದಿ ಮಸೀದಿಗೆ ಈ ಹೆಸರು ಬಂದಿದ್ದು ಪ್ರಧಾನಿನರೇಂದ್ರ ಮೋದಿಯಿಂದಲ್ಲ!

ಫ್ಯಾಕ್ಟ್‌ಚೆಕ್
ಈ ವೈರಲ್ ಟ್ವೀಟ್‌ನಲ್ಲಿರುವ ಸಂಗತಿ ನಿಜವೇ ಎಂಬುದನ್ನು ಅರಿಯಲು ಬೂಮ್‌ಲೈವ್ ಫ್ಯಾಕ್ಟ್‌ಚೆಕ್ ಮಾಡಿದೆ.Modi Masjid Bengaluru ಎಂದು ಗೂಗಲಿಸಿದಾಗ ಯೂಟ್ಯೂಬ್ ವಿಡಿಯೊವೊಂದು ಸಿಕ್ಕಿದೆ.ಮಸೀದಿಯ ಪುನರ್‌ನಿರ್ಮಾಣದ ನಂತರ ಉದ್ಘಾಟನಾ ಕಾರ್ಯಕ್ರಮದ ವಿಡಿಯೊ ಇದಾಗಿದೆ.

ADVERTISEMENT

ಈ ವಿಡಿಯೊದಲ್ಲಿ ಮೋದಿ ಮಸೀದಿಯ ಅಧ್ಯಕ್ಷ ಮೌಲಾನಾ ಸಯೀದ್ ಅಲ್ತಾಫ್ ಅಹಮದ್ ಮಾತನಾಡಿದ್ದು, ಈ ಮಸೀದಿ 170 ವರ್ಷಗಳಷ್ಟು ಹಿಂದಿನದ್ದುಎಂದಿದ್ದಾರೆ.ಶ್ರೀಮಂತ ದಾನಿಯಾದ ಮೋದಿ ಅಬ್ದುಲ್ ಗಫೂರ್ ಅವರ ಹೆಸರನ್ನು ಈ ಮಸೀದಿಗಿಡಲಾಗಿದೆ.

ಮೌಲಾನಾ ಮಾತು
ಬೆಂಗಳೂರಿನ ಮೋದಿ ಮಸೀದಿ170 ವರ್ಷ ಪುರಾತನವಾದುದು.ಹಜರತ್ ಮೋದಿ ಅಬ್ದುಲ್ ಗಫೂರ್ ಅವರು ಈ ಮಸೀದಿ ನಿರ್ಮಾಣಕ್ಕೆ ಕೊಡುಗೆ ನೀಡಿದ್ದರು.ಆ ಕಾಲದಲ್ಲಿ 60-70 ಜನರಿಗೆ ಮಾತ್ರ ಇಲ್ಲಿ ಪ್ರಾರ್ಥನೆ ಸಲ್ಲಿಸುವ ಅವಕಾಶವಿತ್ತು.ಹಜರತ್ ಮೋದಿ ಅಬ್ದುಲ್ ಗಫೂರ್ ಅವರಿಗೆ ಮೋದಿ ಎಂಬ ಹೆಸರನ್ನು ಬ್ರಿಟಿಷರು ನೀಡಿದ್ದರು.ಇತ್ತೀಚೆಗಷ್ಟೇ ಈ ಮಸೀದಿಯ ಪುನರ್‌ನಿರ್ಮಾಣ ನಡೆದಿದೆ.

ಟ್ವೀಟ್‌ನಲ್ಲಿ ಮೋದಿ ಮಸೀದಿಯ ಒಳಗೆ ನರೇಂದ್ರ ಮೋದಿಯವರ ಫ್ಲೆಕ್ಸ್ಇರುವ ಫೋಟೊವೊಂದಿತ್ತು.ಈ ಬಗ್ಗೆ ಬೂಮ್ ತಂಡ ಸರ್ಚ್ ಮಾಡಿದಾಗ ಅದು ಇಂದೋರ್‌ನಲ್ಲಿರುವ ಸೈಫೀ ನಗರ್ ಮಸೀದಿಯದ್ದಾಗಿದೆ.

ಮೊದಲ ಮಹಡಿಯಿಂದ ಕೆಳಗೆ ಹಾಲ್‌ನ ಗೋಡೆಯಲ್ಲಿ ಮೋದಿ ಚಿತ್ರವಿರುವ ಫ್ಲೆಕ್ಸ್ ತೂಗು ಹಾಕಿದನ್ನು ಟ್ವೀಟ್ ಚಿತ್ರದಲ್ಲಿ ಕಾಣಬಹುದು.ಈ ಚಿತ್ರದಲ್ಲಿರುವವರು ಪ್ರಧಾನಿ ನರೇಂದ್ರ ಮೋದಿ ಮತ್ತು ಸಯ್ಯೆದ್‌ನ,

ಸೈಫೀ ನಗರ್ ಮಸೀದಿಯ ಹಾಲ್‌ನಲ್ಲಿ ಹೀಗೊಂದು ಫ್ಲೆಕ್ಸ್ ಇದೆ ಎಂದು ದಾವೂದಿ ಬೋರಾ ಸಮುದಾಯದ ಸದಸ್ಯರು ದೃಢೀಕರಿಸಿದ್ದಾರೆ.

ಕಳೆದ ವರ್ಷ ಸಪ್ಟೆಂಬರ್ ತಿಂಗಳಲ್ಲಿ ನರೇಂದ್ರ ಮೋದಿಯವರು ಇಸ್ಲಾಮಿಕ್ ಪ್ರಚಾರಕ ಡಾ. ಸಯ್ಯದ್‌ನ ಮುಫಾದಲ್ ಸೈಫುದ್ದೀನ್ ಅವರನ್ನು ಭೇಟಿ ಮಾಡಿದ್ದರು. ಈ ಭೇಟಿಯ ಚಿತ್ರಗಳನ್ನು ಮೋದಿ ಟ್ವೀಟ್ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.