ADVERTISEMENT

ಫ್ಯಾಕ್ಟ್ ಚೆಕ್: ನಿರ್ಮಲಾ ಸೀತಾರಾಮನ್ ಮೆಟ್ರೊ ಪ್ರಯಾಣದ ವಿಡಿಯೊ ಹಳೆಯದು

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 23:43 IST
Last Updated 21 ಜುಲೈ 2024, 23:43 IST
<div class="paragraphs"><p>ನಿರ್ಮಲಾ ಸೀತಾರಾಮನ್ ಮೆಟ್ರೊ ಪ್ರಯಾಣ</p></div>

ನಿರ್ಮಲಾ ಸೀತಾರಾಮನ್ ಮೆಟ್ರೊ ಪ್ರಯಾಣ

   

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೆಹಲಿ ಮೆಟ್ರೊದಲ್ಲಿ ಪ್ರಯಾಣಿಸುತ್ತಿರುವ 27 ಸೆಕೆಂಡ್‌ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಚಿವೆಯೊಂದಿಗೆ ಭದ್ರತಾ ಸಿಬ್ಬಂದಿ ಇರುವುದು ಕೂಡ ವಿಡಿಯೊದಲ್ಲಿ ಇದೆ. ‘ಕೇಂದ್ರ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಅವರು ಪ್ರತಿದಿನ ಮೆಟ್ರೊದಲ್ಲಿ ಕಚೇರಿಗೆ ಪ್ರಯಾಣಿಸುತ್ತಾರೆ’ ಎನ್ನುವ ಉಲ್ಲೇಖದೊಂದಿಗೆ ಅನೇಕರು ಈ ವಿಡಿಯೊ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಹಳೆಯ ವಿಡಿಯೊ ಆಗಿದ್ದು, ಸಚಿವೆ ಪ್ರತಿ ದಿನ ಮೆಟ್ರೊದಲ್ಲಿ ಕಚೇರಿಗೆ ಹೋಗಿಬರುತ್ತಾರೆ ಎನ್ನುವ ಪ್ರತಿಪಾದನೆ ಸುಳ್ಳು.

ವಿಡಿಯೊ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೀವರ್ಡ್ ಸರ್ಚ್ ಮಾಡಿದಾಗ, ನಿರ್ಮಲಾ ಸೀತಾರಾಮನ್ ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ 2024ರ ಮೇ 27ರಂದು ಈ ವಿಡಿಯೊ ಹಂಚಿಕೊಂಡಿರುವುದು ಕಂಡುಬಂತು. ನಿರ್ಮಲಾ ಅವರು ಲಕ್ಷ್ಮಿನಗರಕ್ಕೆ ಮೆಟ್ರೊ ಮೂಲಕ ಪ್ರಯಾಣಿಸಿದ್ದಾಗಿ ಆ ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿತ್ತು. ಈ ಸಂಬಂಧ ಮತ್ತಷ್ಟು ಹುಡುಕಾಟು ನಡೆಸಿದಾಗ, ಕೇಂದ್ರ ಸಚಿವ ಹರ್ಷ ಮಲ್ಹೋತ್ರಾ ಅಧಿಕೃತ ಎಕ್ಸ್‌ ಖಾತೆಯಲ್ಲಿ ಒಂದು ಪೋಸ್ಟ್ ಕಂಡುಬಂತು. ಅದರಲ್ಲಿ, ಲೋಕಸಭಾ ಚುನಾವಣೆಯಲ್ಲಿ ಹರ್ಷ ಅವರನ್ನು ಬೆಂಬಲಿಸಲು, ಲಕ್ಷ್ಮಿನಗರ ಮೆಟ್ರೊ ಸ್ಟೇಷನ್‌ನಲ್ಲಿ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ನಿರ್ಮಲಾ ಅವರು ಮೆಟ್ರೊದಲ್ಲಿ ಪ್ರಯಾಣಿಸಿದರು ಎಂದು ಉಲ್ಲೇಖಿಸಲಾಗಿದೆ. ಈ ಹಳೆಯ ವಿಡಿಯೊ ಅನ್ನು ಕೆಲವರು ಸುಳ್ಳು ಪ್ರತಿಪಾದನೆಗಳೊಂದಿಗೆ ಈಗ ಹಂಚಿಕೊಳ್ಳುತ್ತಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.