ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ವಾಹನವನ್ನು ಪ್ರತಿಭಟನಾಕಾರರು ತಡೆಯುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಉತ್ತರ ಪ್ರದೇಶದಲ್ಲಿ ಕೇಂದ್ರ ಸಚಿವರೊಬ್ಬರಿಗೆ ನೀಡುವ ಗೌರವವಿದು ಎಂದು ವಿಡಿಯೊವನ್ನು ಬಿಂಬಿಸಲಾಗಿದೆ. ಬಿಜೆಪಿ ನಾಯಕರಿಗೆ ಈ ರೀತಿಯ ಅವಮಾನ ಮಾಡುತ್ತಿರುವುದನ್ನು ನೋಡಿ ಹಿಂದೂಗಳಿಗೆ ಬೇಸರವಾಗುತ್ತಿಲ್ಲವೇ? ಇಂಥ ದಿನವನ್ನು ನಾವು ನೋಡಬಾರದಿತ್ತು.ಬಿಜೆಪಿ ನಾಯಕರನ್ನು ಈ ರೀತಿ ಏಕೆ ನಡೆಸಿಕೊಳ್ಳಲಾಗುತ್ತಿದೆ ಎಂಬ ಕುರಿತು ಚಿಂತನೆ ನಡೆಯಬೇಕು ಎಂದು ವಿಡಿಯೊಗೆ ಅಡಿಬರಹ ಬರೆಯಲಾಗಿದೆ.
ಈ ವಿಡಿಯೊ ಜೊತೆ ನೀಡಿರುವ ಮಾಹಿತಿ ಸುಳ್ಳು ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಈಗ ವೈರಲ್ ಆಗುತ್ತಿರುವ ವಿಡಿಯೊ 2020ರದ್ದು. ಹಾಥರಸ್ ಸಾಮೂಹಿಕ ಅತ್ಯಾಚಾರದ ವಿರುದ್ಧ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು ಸ್ಮೃತಿ ಇರಾನಿ ಅವರ ವಾಹನವನ್ನು ತಡೆಗಟ್ಟಿದ್ದರು. ಈ ಘಟನೆ ಕುರಿತ ವರದಿಗಳು ‘ನಯೂಝ್ ಟೀವಿ ಯು ಟ್ಯೂಬ್ ವಾಹಿನಿ’ಯಲ್ಲಿ 2020ರ ಅ.3ರಂದು ಪ್ರಕಟವಾಗಿವೆ. ಈ ವಾಹಿನಿ ಪ್ರಕಟಿಸಿರುವ ಸುದ್ದಿ ಪ್ರಕಾರ ಈ ಘಟನೆ ವಾರಾಣಸಿಯಲ್ಲಿ ನಡೆದಿತ್ತು ಎಂದು ಇಂಡಿಯಾ ಟುಡೆ ವರದಿಯಲ್ಲಿ ಮಾಹಿತಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.