ADVERTISEMENT

ಫ್ಯಾಕ್ಟ್ ಚೆಕ್: ವೃದ್ಧರೊಬ್ಬರು ಅಖಿಲೇಶ್ ಯಾದವ್‌ಗೆ ಬೈದಿದ್ದು ನಿಜವಾ?

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 5:08 IST
Last Updated 11 ಫೆಬ್ರುವರಿ 2022, 5:08 IST
ಫ್ಯಾಕ್ಟ್‌ ಚೆಕ್‌ 
ಫ್ಯಾಕ್ಟ್‌ ಚೆಕ್‌    

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಇರುವ 14 ಸೆಕೆಂಡ್‌ಗಳ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಗ್ರಾಮಸ್ಥರ ಜೊತೆಅಖಿಲೇಶ್‌ ಮಾತನಾಡುತ್ತಿರುವುದು ವಿಡಿಯೊದಲ್ಲಿ ಸೆರೆ ಆಗಿದೆ. ಅಖಿಲೇಶ್‌ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ವೃದ್ಧರೊಬ್ಬರು ‘ನೀವು ಮಸೀದಿಗಳನ್ನು ನಿರ್ಮಿಸಿದ್ದೀರಿ. ಹಾಗಾಗಿ ನಿಮ್ಮ ಪಕ್ಷಕ್ಕೆ ಮತ ನೀಡುವುದಿಲ್ಲ’ ಎಂದು ಅಖಿಲೇಶ್‌ಗೆ ನೇರವಾಗಿ ಹೇಳಿದ್ದಾರೆ ಎಂದು ಈ ವಿಡಿಯೊವನ್ನು ಬಿಂಬಿಸಲಾಗಿದೆ. ಬಿಜೆಪಿ ಸಾಮಾಜಿಕ ಜಾಲತಾಣ ಉಸ್ತುವಾರಿ ಪ್ರೀತಿ ಗಾಂಧಿ ಸೇರಿ ಬಿಜೆಪಿಯ ಹಲವು ನಾಯಕರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಈಗ ವೈರಲ್‌ ಆಗಿರುವ ವಿಡಿಯೊ ಎರಡು ವರ್ಷ ಹಿಂದಿನದ್ದು ಎಂದು ದಿ ಲಾಜಿಕಲ್‌ ಇಂಡಿಯನ್‌ ವೇದಿಕೆ ವರದಿ ಮಾಡಿದೆ. ವೃದ್ಧರು ಮಸೀದಿಗಳ ಕುರಿತು ಮಾತನಾಡಿಲ್ಲ, ಅವರು ಇವಿಎಂ ಕುರಿತು ಮಾತನಾಡಿದ್ದಾರೆ. 2019ರ ನ.12ರಂದೇ ಈ ವಿಡಿಯೊವನ್ನು ಎಸ್‌ಪಿ ವಕ್ತಾರೆ ರೋಲಿ ತಿವಾರಿ ಮಿಶ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದರು. ಅಖಿಲೇಶ್‌ರನ್ನು ಉದ್ದೇಶಿಸಿ ವೃದ್ಧ ವ್ಯಕ್ತಿ, ‘ಮಷಿನ್‌ಗಳಿಗೆ ಬೆಂಕಿ ಹಚ್ಚಿ’ ಎಂದು ಹೇಳುತ್ತಿರುವುದು ಮೂಲ ವಿಡಿಯೊದಲ್ಲಿ ಕೇಳುತ್ತದೆ. ಅದನ್ನೇ ತಿರುಚಿ, ಬಿಜಿಪಿ ನಾಯಕರು ಹಂಚಿಕೊಂಡಿದ್ದಾರೆ ಎಂದು ದಿ ಲಾಜಿಕಲ್‌ ಇಂಡಿಯನ್‌ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT