ADVERTISEMENT

Fact Check: ಮತ ಹಾಕದಿದ್ದರೆ, ಬ್ಯಾಂಕ್‌ ಖಾತೆಯಿಂದ ಹಣ ಕಡಿತ ಎಂಬುದು ಸುಳ್ಳು

Fact Check

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2023, 18:37 IST
Last Updated 21 ಸೆಪ್ಟೆಂಬರ್ 2023, 18:37 IST
Fake News
Fake News    

‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತಹಾಕದಿದ್ದರೆ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುತ್ತದೆ. ಈ ಬಗ್ಗೆ ಸರ್ಕಾರವು ಎಚ್ಚರಿಕೆ ನೀಡಿದೆ. ನಿಮ್ಮಲ್ಲಿ ಬ್ಯಾಂಕ್‌ ಖಾತೆ ಇಲ್ಲದಿದ್ದರೆ, ನೀವು ನಿಮ್ಮ ಮೊಬೈಲ್‌ಗೆ ರೀಚಾರ್ಜ್ ಮಾಡಿದಾಗ ಆ ಹಣ ಕಡಿತವಾಗುತ್ತದೆ.  ಬ್ಯಾಂಕ್‌ ಖಾತೆ, ಮತದಾರರ ಗುರುತಿನ ಚೀಟಿ, ಮೊಬೈಲ್‌ ಸಂಖ್ಯೆ ಎಲ್ಲವನ್ನೂ ಪರಸ್ಪರ ಜೋಡಿಸಿರುವುದರಿಂದ ಇದು ಸಾಧ್ಯವಾಗುತ್ತದೆ. ಹೀಗಾಗಿ ಎಲ್ಲರೂ ತಪ್ಪದೇ ಮತದಾನ ಮಾಡಿ’ ಎಂಬ ವಿವರ ಇರುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲವು ಸುದ್ದಿತಾಣಗಳು ಈ ಸಂಬಂಧ ಪ್ರಕಟಿಸಿರುವ ಸುದ್ದಿಗಳ ಸ್ಕ್ರೀನ್‌ಶಾಟ್‌ ಸಹ ಹರಿದಾಡುತ್ತಿದೆ. ಆದರೆ ಇದು ಸುಳ್ಳು ಸುದ್ದಿ.

2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಇಂಥದ್ದೇ ಸುಳ್ಳು ಸುದ್ದಿಯು ಹಂಚಿಕೆಯಾಗಿತ್ತು. ಆಗಲೇ ಪಿಐಬಿ ಈ ಬಗ್ಗೆ ಫ್ಯಾಕ್ಟ್‌ಚೆಕ್‌ ಪ್ರಕಟಿಸಿತ್ತು. ಮತಹಾಕದಿದ್ದರೆ ಬ್ಯಾಂಕ್ ಖಾತೆಯಿಂದ ಹಣ ಕಡಿತ ಮಾಡುವ ಮತ್ತು ಮೊಬೈಲ್‌ ರೀಚಾರ್ಜ್‌ನ ಹಣ ಕಡಿತ ಮಾಡುವ ಸಂಬಂಧ ಸರ್ಕಾರವು ಯಾವುದೇ ಆದೇಶ ಹೊರಡಿಸಿಲ್ಲ. ಈ ಸಂಬಂದ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಪಿಐಬಿ ವಿವರಿಸಿತ್ತು. ಈಗ 2024ರ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮತ್ತೆ ಅಂಥದ್ದೇ ಸುಳ್ಳು ಸುದ್ದಿ ಹರಿದಾಡುತ್ತಿದೆ. ಇದು ಸುಳ್ಳು ಸುದ್ದಿ ಎಂದು ಪಿಐಬಿ ಮತ್ತೆ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT