ADVERTISEMENT

Fact Check: ಇದು ಸಚಿವೆ ನಿರ್ಮಲಾ ಅವರದ್ದು ಡೀಪ್‌ಫೇಕ್‌ ವಿಡಿಯೊ

Fact Check

ಫ್ಯಾಕ್ಟ್ ಚೆಕ್
Published 10 ಜನವರಿ 2024, 19:42 IST
Last Updated 10 ಜನವರಿ 2024, 19:42 IST
<div class="paragraphs"><p>Fact Check: ಇದು ಸಚಿವೆ ನಿರ್ಮಲಾ ಅವರದ್ದು ಡೀಪ್‌ಫೇಕ್‌ ವಿಡಿಯೊ</p></div>

Fact Check: ಇದು ಸಚಿವೆ ನಿರ್ಮಲಾ ಅವರದ್ದು ಡೀಪ್‌ಫೇಕ್‌ ವಿಡಿಯೊ

   

‘ಪ್ರಮುಖ ಘೋಷಣೆ! ಕ್ವಾಂಟಮ್‌ಟ್ರೇಡ್‌ ಕ್ರಿಪ್ಟೊ ವ್ಯಾಪಾರ ಕಂಪೆನಿಯೊಂದಿಗೆ ಸಹಭಾಗಿತ್ವ ಏರ್ಪಟ್ಟಿದೆ’ ಎಂದು ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಹೇಳಿಕೆ ನೀಡುತ್ತಿರುವ ವಿಡಿಯೊವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಉದ್ಯಮಿ ಇಲಾನ್‌ ಮಸ್ಕ್‌ ಅವರು ತಮ್ಮ ಹೊಸದಾದ ‘ಕ್ವಾಂಟಮ್‌ಟ್ರೇಡ್‌’ ಎನ್ನುವ ಕಂಪೆನಿಯನ್ನು ತೆರೆದಿದ್ದೇನೆ ಎಂದು ಫಾಕ್ಸ್‌ ನ್ಯೂಸ್‌ ಪತ್ರಿಕೆಗೆ ಸಂದರ್ಶ ನೀಡಿದ್ದಾರೆ’ ಎಂದೂ ವಿಡಿಯೊದೊಂದಿಗೆ ಪೋಸ್ಟ್‌ ಹರಿದಾಡುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.


ರಿವರ್ಸ್‌ ಇಮೇಜ್‌ ಬಳಸಿ, ಸಚಿವೆ ನಿರ್ಮಲಾ ಅವರ ವಿಡಿಯೊವನ್ನು ಹುಡುಕಲಾಯಿತು. ಈ ವೇಳೆ 2023ರ ಡಿಸೆಂಬರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯ ವಿಡಿಯೊ ದೊರಕಿತು. ಈ ವಿಡಿಯೊವನ್ನು ಪಿಐಬಿ ಹಂಚಿಕೊಂಡಿದ್ದು, ‘ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮಿಳುನಾಡಿನ ಪ್ರವಾಹ ಪರಿಸ್ಥಿತಿಯ ಬಗ್ಗೆ ಸರ್ಕಾರವು ಕೈಗೊಂಡ ಕ್ರಮಗಳ ಬಗ್ಗೆ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ’ ಎಂಬ ಕ್ಯಾಪ್ಷನ್‌ ನೀಡಿದೆ. ಜೊತೆಗೆ, ನಿರ್ಮಲಾ ಅವರು ಆ ಗೋಷ್ಠಿಯಲ್ಲಿ ಹೆಚ್ಚಿನ ಭಾಗ ತಮಿಳಿನಲ್ಲಿಯೇ ಮಾತನಾಡಿದ್ದಾರೆ. ಫಾಕ್ಸ್‌ ನ್ಯೂಸ್‌ ಪತ್ರಿಕೆಯ ವೆಬ್‌ಸೈಟ್‌ನಲ್ಲಿ ಈ ಸಂಬಂಧ, ಇಲಾನ್‌ ಮಸ್ಕ್‌ ಅವರದ್ದು ಎನ್ನಲಾದ ಸಂದರ್ಶನದ ಯಾವುದೇ ವಿಡಿಯೊ ಅಥವಾ ಬರಹ ದೊರಕಲಿಲ್ಲ. ಆದ್ದರಿಂದ, ನಿರ್ಮಲಾ ಅವರದ್ದು ಎನ್ನಲಾದ ವಿಡಿಯೊವು ಡೀಪ್‌ಫೇಕ್‌ ವಿಡಿಯೊ ಎಂದು ‘ದಿ ಕ್ವಿಂಟ್‌’ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.