ಶಿವಸೇನಾ (ಉದ್ಧವ್ ಠಾಕ್ರೆ ಬಣ) ಮುಖಂಡ ಸಂಜಯ್ ರಾವುತ್ ಅವರ ಹೇಳಿಕೆ ಆಧರಿಸಿದೆ ಎನ್ನಲಾಗುತ್ತಿರುವ ‘ಪುಢಾರಿ ನ್ಯೂಸ್’ (ಮರಾಠಿ ವಾಹಿನಿ) ಗ್ರಾಫಿಕ್ಸ್‌ನ ಸ್ಕ್ರೀನ್ ಶಾಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಶಿವಸೇನಾ ಗೆದ್ದು, ಉದ್ಧವ್ ಠಾಕ್ರೆ ಮತ್ತೆ ಮುಖ್ಯಮಂತ್ರಿ ಬಂದರೆ, ಫಲವಂತಿಕೆ ದರವು ಹೆಚ್ಚಾಗಿರುವ ಮುಸ್ಲಿಂ ಮಹಿಳೆಯರಿಗೆ ಪೌಷ್ಟಿಕಾಂಶಗಳ ಸೇವನೆಗೆ ಅನುಕೂಲವಾಗುವಂತೆ ತಿಂಗಳಿಗೆ ₹6,000ದಂತೆ ಆರ್ಥಿಕ ನೆರವು ನೀಡಲಿದೆ ಎಂಬುದಾಗಿ ರಾವುತ್ ಹೇಳಿದ್ದಾರೆ ಎಂದು ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗ್ರಾಫಿಕ್ಸ್‌ನ ಅಕ್ಷರ ವಿನ್ಯಾಸಕ್ಕಿಂತ (ಫಾಂಟ್), ‘ಪುಢಾರಿ ನ್ಯೂಸ್’ ಸುದ್ದಿವಾಹಿನಿಯಲ್ಲಿ ಬಳಸಲಾಗುವ ಗ್ರಾಫಿಕ್ಸ್ ಅಕ್ಷರ ವಿನ್ಯಾಸ ಭಿನ್ನವಾಗಿದೆ. ಜತೆಗೆ, ಈ ಗ್ರಾಫಿಕ್ಸ್ ಬಗ್ಗೆ ಸುದ್ದಿವಾಹಿನಿಯ ಮುಖ್ಯಸ್ಥರನ್ನು ಸಂಪರ್ಕಿಸಿದಾಗ, ಇದು ನಕಲಿ ಎಂದು ಅವರು ಸ್ಪಷ್ಟಪಡಿಸಿದರು. ಮುಸ್ಲಿಂ ಮಹಿಳೆಯರಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವ ಬಗ್ಗೆ ಯಾವುದೇ ರೀತಿಯ ಹೇಳಿಕೆಯನ್ನು ಸಂಜಯ್ ರಾವುತ್ ಅವರು ನೀಡಿಲ್ಲ. ಈ ಬಗ್ಗೆ ಬೂಮ್ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.