ADVERTISEMENT

ಫ್ಯಾಕ್ಟ್‌ಚೆಕ್‌: ಹಿಂದಿ ಹಾಡಿಗೆ ನರ್ತಿಸುತ್ತಿರುವ ಮಹಿಳೆ ಸ್ಮೃತಿ ಸಿಂಗ್ ಅಲ್ಲ

​ಪ್ರಜಾವಾಣಿ ವಾರ್ತೆ
Published 17 ಜುಲೈ 2024, 21:59 IST
Last Updated 17 ಜುಲೈ 2024, 21:59 IST
..
..   

ಮಹಿಳೆಯೊಬ್ಬರು ಹಿಂದಿ ಚಿತ್ರಗೀತೆಗೆ ನರ್ತಿಸುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನರ್ತಿಸುತ್ತಿರುವವರು ಕೀರ್ತಿ ಚಕ್ರ ಪುರಸ್ಕೃತರಾದ ಹುತಾತ್ಮ ಕ್ಯಾಪ್ಟನ್ ಅನ್ಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಎಂದು ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಆರೋಪಿಸಿದ್ದಾರೆ. ‘ಶೌರ್ಯ ಚಕ್ರ ಪದಕ ಹಾಗೂ ₹1 ಕೋಟಿಯೊಂದಿಗೆ ಮನೆ ಬಿಟ್ಟು ಹೋಗಿರುವ ಈ ಮಹಿಳೆಯನ್ನು ನೋಡಿ..’ ಎಂಬ ಅಡಿಬರಹದೊಂದಿಗೆ ಅನೇಕರು ಈ ವಿಡಿಯೊ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ, ವಿಡಿಯೊದಲ್ಲಿ ಇರುವುದು ಸ್ಮೃತಿ ಸಿಂಗ್ ಅಲ್ಲ.

ವಿಡಿಯೊ ಅನ್ನು ಇನ್‌ವಿಡ್ ಟೂಲ್ ಸರ್ಚ್‌ಗೆ ಒಳಪಡಿಸಿ, ಅದರ ಕೀಫ್ರೇಮ್‌ಗಳನ್ನು ಗೂಗಲ್ ಲೆನ್ಸ್ ಮೂಲಕ ಪರಿಶೀಲಿಸಿದಾಗ, ಬಹುತೇಕರು ಹಂಚಿಕೊಂಡಿರುವುದು ಒಂದೇ ವಿಡಿಯೊ ಎನ್ನುವುದು ಕಂಡುಬಂತು. ಈ ಬಗ್ಗೆ ಮತ್ತಷ್ಟು ಪರಿಶೀಲಿಸಿದಾಗ, ರೇಷ್ಮಾ ಸೆಬಾಸ್ಟಿಯನ್ ಎನ್ನುವ ನಟಿ ಮತ್ತು ರೂಪದರ್ಶಿಯ ಇನ್‌ಸ್ಟಾಗ್ರಾಮ್ ಅಕೌಂಟ್‌ನ ಸಂಪರ್ಕ ಸಿಕ್ಕಿತು. ಸ್ಮೃತಿ ಸಿಂಗ್ ಅವರದ್ದು ಎಂದು ಪ್ರತಿಪಾದನೆ ಮಾಡುತ್ತಿರುವ ವಿಡಿಯೊ ವಾಸ್ತವವಾಗಿ ರೇಷ್ಮಾ ಅವರದ್ದು. ರೇಷ್ಮಾ ಅವರು ಕೂಡ ಇದನ್ನು ದೃಢಪಡಿಸಿದ್ದಾರೆ. ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪಿಟಿಐ ಫ್ಯಾಕ್ಟ್ ಚೆಕ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT