‘ಈ ಕೆಳಗಡೆ ನೀಡಿದ ಲಿಂಕ್ ಮೇಲೆ ಕ್ಲಿಕ್ ಮಾಡಿ. ಆವಾಗ ನಿಮಗೆ ಹಸಿರು ಚುಕ್ಕೆಗಳು ಕಂಡುಬರುತ್ತವೆ. ಅವು ಇಡೀ ಜಗತ್ತಿನಲ್ಲಿರುವ ಎಫ್‌ಎಂ ರೇಡಿಯೊ ಸ್ಟೇಷನ್‌ಗಳು. ನೀವು ಯಾವುದೇ ಹಸಿರು ಚುಕ್ಕೆಯ ಮೇಲೆ ಕ್ಲಿಕ್ ಮಾಡಿದಾಗ ಆಯಾ ಪ್ರದೇಶಗಳಲ್ಲಿನ ಎಫ್‌ಎಂ ಅನ್ನು ಕೇಳಿ ಆನಂದಿಸಬಹುದು. ಅಚ್ಚರಿಯೆಂದರೆ ಈ ರೀತಿ ಕೇಳಲು ಇಯರ್‌ಫೋನ್‌ನ ಅಗತ್ಯವಿಲ್ಲ. ಇದನ್ನು ಅಭಿವೃದ್ಧಿ ಪಡಿಸಿದ್ದು ನಮ್ಮ ಇಸ್ರೊ. ಅದಕ್ಕೆ ಧನ್ಯವಾದಗಳು’ ಎಂಬ ಬರಹ ಇರುವ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ಆದರೆ, ಈ ಇಂಥ ಯಾವುದೇ ವ್ಯವಸ್ಥೆಯನ್ನು ಇಸ್ರೊ ಅಭಿವೃದ್ಧಿಪಡಿಸಿಲ್ಲ.
‘ರೇಡಿಯೊ ಗಾರ್ಡನ್’ ಎನ್ನುವ ರೇಡಿಯೊ ವಾಹಿನಿಯನ್ನು ಸ್ಟುಡಿಯೊ ಪೂಕೆ ಆ್ಯಂಡ್ ಮೋನಿಕರ್ ಕಂಪೆನಿಯು ಅಭಿವೃದ್ಧಿ ಪಡಿಸಿದೆ. ಇದು ನೆದರ್‌ಲೆಂಡ್ಸ್ ಮೂಲದ ಕಂಪೆನಿಯಾಗಿದೆ. ನೆದರ್‌ಲೆಂಡ್ಸ್ ಇನ್‌ಸ್ಟಿಟ್ಯೂಟ್ ಫಾರ್ ಸೌಂಡ್ ಆ್ಯಂಡ್ ವಿಷನ್ ಎನ್ನುವ ಸಂಸ್ಥೆ ಏರ್ಪಡಿಸಿದ್ದ ಪ್ರದರ್ಶನ ಯೋಜನೆಯೊಂದಕ್ಕಾಗಿ ‘ರೇಡಿಯೊ ಗಾರ್ಡನ್’ ವಾಹಿನಿ ಯೋಜನೆಯನ್ನು ಸ್ಟುಡಿಯೊ ಪೂಕೆ 2016ರಲ್ಲಿ ಅಭಿವೃದ್ಧಿ ಪಡಿಸಿತ್ತು. ನಂತರ 2019ರಲ್ಲಿ ‘ರೇಡಿಯೊ ಗಾರ್ಡನ್’ ವಾಹಿನಿಯನ್ನು ಸಣ್ಣ ಉದ್ಯಮವಾಗಿ ಕಂಪನಿ ರೂಪಾಂತರಿಸಿತು. ಈ ಯೋಜನೆಗೂ ಇಸ್ರೊಗು ಯಾವುದೇ ಸಂಬಂಧ ಇಲ್ಲ ಎಂದು ನೆದರ್‌ಲೆಂಡ್ಸ್ ಇನ್‌ಸ್ಟಿಟ್ಯೂಟ್ ಫಾರ್ ಸೌಂಡ್ ಆ್ಯಂಡ್ ವಿಷನ್ ಸಂಸ್ಥೆಯ ವಕ್ತಾರ ಬಾಸ್ ಅಡರ್‌ಬರ್ಗ್ ಅವರು ಸ್ಪಷ್ಟನೆ ನೀಡಿದ್ದಾರೆ. ಆದ್ದರಿಂದ, ‘ರೇಡಿಯೊ ಗಾರ್ಡನ್’ಗೂ ಇಸ್ರೊಗು ಯಾವುದೇ ಸಂಬಂಧ ಇಲ್ಲ ಎಂದು ಎಎಫ್‌ಪಿ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.