ADVERTISEMENT

ರಣ್‌ವೀರ್- ದೀಪಿಕಾ ಬಿಜೆಪಿ ಪರ ಪ್ರಚಾರ ಮಾಡಿಲ್ಲ: ಇದು ಫೋಟೊಶಾಪ್ ಕೈಚಳಕ!

​ಪ್ರಜಾವಾಣಿ ವಾರ್ತೆ
Published 4 ಮೇ 2019, 16:01 IST
Last Updated 4 ಮೇ 2019, 16:01 IST
   

ಮುಂಬೈ: ಬಾಲಿವುಡ್ ದಂಪತಿ ರಣ್‌ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ ಎಂಬ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.ಈ ಜೋಡಿ ಕೇಸರಿ ಶಾಲು ಧರಿಸಿರುವಫೋಟೊ ಇದಾಗಿದ್ದು, ಶಾಲು ಮೇಲೆ ಬಿಜೆಪಿಗೆ ಮತ ನೀಡಿ ಎಂದು ಬರೆದಿದೆ.

Ek Bihari 100 Pe Bhari ಎಂಬ ಫೇಸ್‍ಬುಕ್ ಪುಟದಲ್ಲಿ ಈ ಚಿತ್ರ ಶೇರ್ ಆಗಿದ್ದು, ಕಮಲದ ಚಿಹ್ನೆಗೆ ಮತ ನೀಡುವ ಮೂಲಕ ದೇಶದ ಅಭಿವೃದ್ದಿಯ ಪಾಲುದಾರರಾಗಿ ಎಂದಿದೆ. ಕೆಲವುನೆಟಿಜನ್‍ಗಳೂ ಇದೇ ಚಿತ್ರವನ್ನು ಶೇರ್ ಮಾಡಿದ್ದಾರೆ.

ಆದರೆ ದೀಪಿಕಾ ಮತ್ತು ರಣ್‌ವೀರ್ ಯಾವುದೇ ಪಕ್ಷದ ಪರ ಚುನಾವಣಾ ಪ್ರಚಾರ ಮಾಡಿಲ್ಲ. ಇವರು ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ ಎಂದು ಬಿಂಬಿಸುತ್ತಿರುವಈ ಫೋಟೊ ಫೋಟೊಶಾಪ್ ಮಾಡಿದ್ದು ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ ಮಾಡಿದೆ.

ADVERTISEMENT

ಫ್ಯಾಕ್ಟ್‌ಚೆಕ್
ಇದೇ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಚ್ ಸರ್ಚ್ ಮಾಡಿದಾಗ ನಿಜವಾದ ಫೋಟೊ ಸಿಕ್ಕಿದೆ.

ಈ ಫೋಟೊ ನವೆಂಬರ್ 3-2018ರಲ್ಲಿ ಕ್ಲಿಕ್ಕಿಸಿದ್ದು. ರಣ್‍ವೀರ್ ಮತ್ತು ದೀಪಿಕಾ ಮುಂಬೈಯ ಪ್ರಸಿದ್ದ ದೇವಾಲಯ ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ನೀಡಿದ್ದಾಗ ಕ್ಲಿಕ್ಕಿಸಿದ ಫೋಟೊ ಇದು. ಈ ಚಿತ್ರವನ್ನುಹಲವಾರು ಸುದ್ದಿಗಳಲ್ಲಿಯೂ ಬಳಸಲಾಗಿದೆ.ಇದರಲ್ಲಿಇವರಿಬ್ಬರು ಕೇಸರಿ ಶಾಲು ಧರಿಸಿದ್ದಾರೆಯೇ ಹೊರತು ಬಿಜೆಪಿ ಶಾಲು ಅಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.