ಬೆಂಗಳೂರು:'ಜಾತ್ಯಾತೀತ ಭಾರತದ ರಸ್ತೆಯಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸಿ. ಮುಸ್ಲಿಂ ರಾಷ್ಟ್ರಗಳಲ್ಲಿ ಈ ರೀತಿ ಮಾಡಲು ಅನುಮತಿ ಇಲ್ಲ. ಹೀಗಿರುವಾಗ ಇಲ್ಲಿ ಅನುಮತಿ ನೀಡಿದ್ದು ಯಾಕೆ'ಎಂದು ಪಾಯಲ್ರೊಹತಗಿಟ್ವೀಟ್ ಮಾಡಿದ್ದಾರೆ. ಜೂನ್ 3 ರಂದು ಮಾಡಿದ ಈ ಟ್ವೀಟ್‌ನಲ್ಲಿ ನೂರರಷ್ಟು ಮುಸ್ಲಿಮರು ರಸ್ತೆಯಲ್ಲಿ ನಮಾಜ್ ಮಾಡುತ್ತಿರುವುದರಿಂದ ಸಂಚಾರ ದಟ್ಟಣೆಯುಂಟಾಗಿರುವ ಫೋಟೊವೊಂದನ್ನು ಲಗತ್ತಿಸಲಾಗಿದೆ.
ಇದೇ ಚಿತ್ರ ಕಳೆದ ವಾರದಿಂದಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.ಮುಸ್ಲಿಂ ರಾಷ್ಟ್ರಗಳಲ್ಲಿ ಇದು ತಪ್ಪು ಆಗಿದ್ದು, ಭಾರತದಲ್ಲಿ ಸರಿ ಹೇಗೆ? ಮುಸ್ಲಿಂ ರಾಷ್ಟ್ರಗಳಲ್ಲಿ ರಸ್ತೆಯಲ್ಲಿ ನಮಾಜ್ ಮಾಡುವುದಕ್ಕೆ ನಿರ್ಬಂಧವಿದ್ದರೂ, ಭಾರತದಲ್ಲಿ ಯಾಕೆ ಇಲ್ಲ? ನೀವು ಗುಲಾಮರಂತೆ ವರ್ತಿಸುತ್ತಿರುವುದೇಕೆ? ಎಂಬ ಬರಹದೊಂದಿಗೆ ಇದೇ ಚಿತ್ರ भाई राहुल रामराजಫೇಸ್‌ಬುಕ್ ಪುಟದಲ್ಲಿ ಶೇರ್ ಆಗಿದೆ.
ಈ ಚಿತ್ರ ಜೂನ್ 5, ಈದ್ ಹಬ್ಬದ ದಿನದಂದೂ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿದೆ. ಗಮನಿಸಿ ನೋಡಿ,ಈ ಚಿತ್ರದಲ್ಲಿ ಬಸ್, ಕಾರು, ಟ್ಯಾಕ್ಸಿ, ಜೀಪ್, ಆ್ಯಂಬುಲೆನ್ಸ್ ಮತ್ತು ಶಾಲೆಗೆ ಹೋಗುವ ಮಕ್ಕಳು, ಕಚೇರಿಗೆ ಹೋಗುವವರು, ಯಾತ್ರಿಕರು ಇರಬಹುದು.ಆ್ಯಂಬುಲೆನ್ಸ್‌ನಲ್ಲಿ ರೋಗಿಗಳು ಇರಬಹುದು. ಆದರೆ ಇದಕ್ಕಿಂತಲೂಮಹತ್ವದ್ದು ಅಲ್ಲಾಹ್‌ಗೆ ಪ್ರಾರ್ಥನೆ ಸಲ್ಲಿಸುತ್ತಿರುವುದು. ಯಾರಾದರೂ ಹೃದ್ರೋಗಿ, ಅಸ್ತಮಾ ರೋಗಿಗಳು ಸತ್ತು ಹೋದರೇನೆಂತೆ, ಪ್ರಾರ್ಥನೆ ಮುಖ್ಯ ಅಲ್ಲವೇ? ಎಂಬ ಬರಹದೊಂದಿಗೆ WE SUPPORT NARENDRA MODI ಫೇಸ್‌ಬುಕ್ ಪುಟದಲ್ಲಿ ಚಿತ್ರ ಶೇರ್ ಆಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ಚಿತ್ರದ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ಮಾಡಿದ್ದು, ಇದು ಬಾಂಗ್ಲಾದೇಶದ ಚಿತ್ರ ಎಂದು ಹೇಳಿದೆ.
ಫ್ಯಾಕ್ಟ್‌ಚೆಕ್
ಈ ಚಿತ್ರವನ್ನು ಕೂಲಂಕಷವಾಗಿ ನೋಡಿದರೆ ಅದರಲ್ಲಿ robertharding.com ಎಂದು ಇದೆ.
ಇದೇ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಈ ಚಿತ್ರ ಅಪ್‌ಲೋಡ್ ಆಗಿರುವ ವೆಬ್‌ಸೈಟ್ ಸಿಕ್ಕಿದೆ.
ವೆಬ್‌ಸೈಟ್ ಲಿಂಕ್ ಕ್ಲಿಕ್ ಮಾಡಿದಾಗ ಅದರಲ್ಲಿ ಚಿತ್ರದ ಬಗ್ಗೆ ವಿವರಣೆ ಹೀಗಿದೆ-ಬಾಂಗ್ಲಾದೇಶದ ಟೋಂಗಿಯಲ್ಲಿರುವ ಬಿಶಾ ಇಟ್ಜೆಮಾದಲ್ಲಿ ಬುಹುಸಂಖ್ಯೆಯಲ್ಲಿ ಮುಸ್ಲಿಮರು ಸೇರಿರುವುದರಿಂದ ರಸ್ತೆಯಲ್ಲಿಯೇ ಪ್ರಾರ್ಥನೆಸಲ್ಲಿಸುತ್ತಿರುವ ಮುಸ್ಲಿಮರು ಎಂದು ಇದೆ. ಈ ಫೋಟೊ ಕ್ಲಿಕ್ ಮಾಡಿದ್ದು ಎಂ.ಯೂಸಫ್ ಟುಷಾ.
ಇದೇ ಪ್ರದೇಶದಲ್ಲಿ ಕ್ಲಿಕ್ಕಿಸಿದ ಇದೇ ರೀತಿಯ ಚಿತ್ರಗಳು Getty Imagesನಲ್ಲಿಯೂ ಇದೆ.
ಅಂದರೆಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ಹೇಳುವಂತೆ ಈ ಚಿತ್ರ ಭಾರತದ್ದು ಅಲ್ಲ.ಇದು ಬಾಂಗ್ಲಾದೇಶದಲ್ಲಿ ನಮಾಜ್ ಮಾಡುತ್ತಿರುವ ಚಿತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.