ADVERTISEMENT

'ಮೋದಿ ಸೋತರೆ ಆತ್ಮಹತ್ಯೆ ಮಾಡುವೆ ಎಂದ ಸ್ಮೃತಿ ಇರಾನಿ' - ಇದು ಸುಳ್ಳು ಸುದ್ದಿ!

​ಪ್ರಜಾವಾಣಿ ವಾರ್ತೆ
Published 4 ಮೇ 2019, 16:00 IST
Last Updated 4 ಮೇ 2019, 16:00 IST
   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸೋತರೆ ನಾನು ಆತ್ಮಹತ್ಯೆ ಮಾಡುತ್ತೇನೆ ಎಂದು ಕೇಂದ್ರ ಸಚಿವೆಸ್ಮೃತಿ ಇರಾನಿ ಹೇಳಿದ್ದಾರೆ ಎಂಬ ಸುದ್ದಿಯ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಎಬಿಪಿ ನ್ಯೂಸ್‍ನ ಸ್ಕ್ರೀನ್ ಶಾಟ್ ಇದಾಗಿದ್ದು India Resists ಫೇಸ್‌ಬುಕ್ ಪುಟದಲ್ಲಿ ಇದು ಶೇರ್ ಆಗಿದೆ.

ಪತ್ರಕರ್ತರಾಗಿದ್ದು ಸಿನಿಮಾ ನಿರ್ಮಾಪಕರಾದ ಅವಿನಾಶ್ ದಾಸ್ ಕೂಡಾ ಇದೇ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.


ಆದರೆ ಸ್ಮೃತಿ ಇರಾನಿ ಈ ರೀತಿ ಹೇಳಿಕೆ ನೀಡಿಲ್ಲ ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ ಮಾಡಿದೆ.

ADVERTISEMENT

ಸ್ಮೃತಿ ಇರಾನಿ ಈ ರೀತಿಯ ಹೇಳಿಕೆ ನೀಡಿದ್ದರೇ ಎಂದು ಗೂಗಲಿಸಿದಾಗ ಈ ರೀತಿಯ ಹೇಳಿಕೆ ಯಾವುದೂ ಸಿಕ್ಕಿಲ್ಲ.ಆದರೆಪ್ರಧಾನ್ ಸೇವಕ್ ನರೇಂದ್ರ ಮೋದಿ ನಿವೃತ್ತಿ ಹೊಂದಲು ನಿರ್ಧರಿಸಿದ ದಿನ ತಾನು ಭಾರತೀಯ ರಾಜಕಾರಣದಿಂದ ಹೊರಹೋಗುತ್ತೇನೆ ಎಂದು ಸ್ಮೃತಿ ಹೇಳಿದ್ದರು. ಗಮನಿಸಿಸ್ಮೃತಿ ಈ ಹೇಳಿಕೆ ನೀಡಿದ್ದು ಸುದ್ದಿಗೋಷ್ಠಿಯಲ್ಲಿ ಅಲ್ಲ, ಫೆಬ್ರುವರಿಯಲ್ಲಿಪುಣೆಯಲ್ಲಿ ನಡೆದ ವರ್ಡ್ಸ್ ಕೌಂಟ್ ಫೆಸ್ಟಿವಲ್‍ನಲ್ಲಿ.

ವೈರಲ್ ಪೋಸ್ಟ್ ಬಗ್ಗೆ ಕೇಳಲುಆಲ್ಟ್ ನ್ಯೂಸ್ ತಂಡಎಬಿಪಿ ನ್ಯೂಸ್‍ನ ಹಿರಿಯ ಸಂಪಾದಕ ಪಂಕಜ್ ಝಾ ಅವರನ್ನು ಸಂಪರ್ಕಿಸಿದಾಗ, ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿರುವುದು ಎಡಿಟ್ ಮಾಡಿದ ಸ್ಕ್ರೀನ್ ಶಾಟ್ ಎಂದಿದ್ದಾರೆ.

ಸ್ಮೃತಿ ಇರಾನಿ ನಡೆಸಿದ ಸುದ್ದಿಗೋಷ್ಠಿ ಎಬಿಪಿ ನ್ಯೂಸ್‌ನಲ್ಲಿ ಪ್ರಸಾರವಾಗಿದ್ದು ಈ ವಿಡಿಯೊದ ಸ್ಕ್ರೀನ್ ಶಾಟ್ ತೆಗೆದು ಸ್ಮೃತಿ ಹೇಳಿಕೆಯನ್ನು ತಿರುಚಿ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.