ಅಮೆರಿಕದ ನ್ಯಾಯಾಂಗ ಇಲಾಖೆ ಭಾರತದ ಉದ್ಯಮಿ ಗೌತಮ್ ಅದಾನಿ ವಿರುದ್ಧ ಭ್ರಷ್ಟಾಚಾರ ಮತ್ತು ವಂಚನೆ ಆರೋಪ ಮಾಡಿದ ಮರುದಿನವೇ ಅದಾನಿ ಅವರನ್ನು ಪೊಲೀಸರು ಬಂಧಿಸಿ ಕರೆದೊಯ್ಯುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಮೆರಿಕದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಆ ಚಿತ್ರವನ್ನು ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ಚಿತ್ರವನ್ನು ಗೂಗಲ್ ಲೆನ್ಸ್ ಮೂಲಕ ಪರಿಶೀಲನೆ ಮಾಡಿದಾಗ ಇದೇ ಚಿತ್ರವನ್ನು ಅನೇಕರು ಹಂಚಿಕೊಂಡಿರುವುದು ಕಂಡುಬಂತು. ಚಿತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಚಿತ್ರ ಅಸಲಿ ಅಲ್ಲ ಎನ್ನುವ ಅನುಮಾನ ಮೂಡುತ್ತದೆ. ಅದಾನಿ ಅವರನ್ನು ಹಿಡಿದಿಡುವ ಪೊಲೀಸ್ ಒಬ್ಬರಿಗೆ ಕೈಯಲ್ಲಿ ಆರು ಬೆರಳು ಇವೆ. ಚಿತ್ರವನ್ನು ಎಐ ಧ್ವನಿ ಮತ್ತು ಡೀಪ್ ಫೇಕ್ ಪತ್ತೆ ಮಾಡುವ ಟ್ರೂ ಮೀಡಿಯಾ ಆ್ಯಪ್‌ನಲ್ಲಿ ಪರಿಶೀಲನೆ ನಡೆಸಿದಾಗ, ಇದು ಎಐ ನೆರವಿನಿಂದ ಸೃಷ್ಟಿಸಲಾಗಿರುವ ಚಿತ್ರ ಎನ್ನುವುದು ಖಚಿತವಾಯಿತು. ಜತೆಗೆ, ಅದಾನಿ ವಿರುದ್ಧ ವಾರಂಟ್ ಜಾರಿಯಾಗಿದೆ, ಆದರೆ ಬಂಧನ ಆಗಿಲ್ಲ. ಈ ಬಗ್ಗೆ ಪಿಟಿಐ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.