ADVERTISEMENT

Fact Check: ಮಹಿಳೆ ರಸ್ತೆ ಗುಂಡಿಗೆ ಬೀಳುವ ವಿಡಿಯೊ ಅಯೋಧ್ಯೆಯದ್ದಲ್ಲ

ಫ್ಯಾಕ್ಟ್ ಚೆಕ್
Published 11 ಜುಲೈ 2024, 0:18 IST
Last Updated 11 ಜುಲೈ 2024, 0:18 IST
...
...   

ಇತ್ತೀಚೆಗೆ ಸುರಿದ ಭಾರಿ ಮಳೆಗೆ ಅಯೋಧ್ಯೆಯ ರಾಮ ಮಂದಿರದೊಳಗೆ ನೀರು ನುಗ್ಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದೇ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಒಂದು ಹರಿದಾಡುತ್ತಿದೆ. ಒಬ್ಬ ಮಹಿಳೆ ರಸ್ತೆ ಮೇಲೆ ನಡೆದುಹೋಗುವಾಗ, ದೊಡ್ಡ ಗುಂಡಿಗೆ ಬೀಳುತ್ತಾರೆ. ಸ್ಥಳೀಯರು ಅವರ ನೆರವಿಗೆ ಧಾವಿಸುತ್ತಾರೆ. ಇದು ಅಯೋಧ್ಯೆಯ ರಾಮ ಪಥ ಆಗಿದ್ದು, ಗುಜರಾತ್ ಮೂಲದ ಕಂಪನಿಯೊಂದು ಇದನ್ನು ನಿರ್ಮಿಸಿದೆ ಎಂದು ಕೆಲವರು ಪ್ರತಿಪಾದಿಸುತ್ತಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಐ.ಪಿ.ಸಿಂಗ್ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ಗುಜರಾತ್ ಮಾದರಿ’ ಎಂದು ಉಲ್ಲೇಖಿಸಿದ್ದಾರೆ. ಆದರೆ, ಇದು ಅಯೋಧ್ಯೆಯ ರಸ್ತೆಗೆ ಸಂಬಂಧಿಸಿದ ವಿಡಿಯೊ ಎನ್ನುವುದು ಸುಳ್ಳು. 

ವಿಡಿಯೊ ಅನ್ನು ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದಾಗ, ಇದು ಬ್ರೆಜಿಲ್‌ನ ಐಎಸ್‌ಟಿಒಇ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದ್ದ ಲೇಖನಕ್ಕೆ ಸಂಪರ್ಕ ನೀಡಿತು. ಅದರಲ್ಲಿ ಮರಿಯಾ ರೋಸಿಲಿನ್ ಅಲ್ಮೈದಾ ಡಿಸೋಜಾ ಅವರು ಫೋರ್ಟಲೇಜಾ ನಗರದ ರಸ್ತೆಯಲ್ಲಿ ನಡೆಯುವಾಗ ಗುಂಡಿಗೆ ಬಿದ್ದಿದ್ದರ ಬಗ್ಗೆ ಉಲ್ಲೇಖವಿತ್ತು. ಇದೇ ಸುದ್ದಿಗೆ ಸಂಬಂಧಿಸಿದಂತೆ ‘ಒಸಿಪಿ ನ್ಯೂಸ್’ ಯು ಟ್ಯೂಬ್ ಚಾನೆಲ್‌ನಲ್ಲಿ ಜೂನ್ 3, 2022ರಂದು ಸುದ್ದಿ ಪ್ರಸಾರವಾಗಿತ್ತು. ಈ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿದೆ. ಇದು ಅಯೋಧ್ಯೆಯ ವಿಡಿಯೊ ಎಂದು ಪ್ರಚಾರ ಮಾಡುತ್ತಿರವವರ ಬಗ್ಗೆ ಕಾನೂನು ಕ್ರಮ ಜರುಗಿಸುವುದಾಗಿ ಅಯೋಧ್ಯೆಯ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.            

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT