ಯುವಕನೊಬ್ಬ ಸುತ್ತಿಗೆಯಿಂದ ರೈಲಿನ ಕಿಟಕಿ ಗಾಜನ್ನು ಒಡೆದು ಹಾಕುತ್ತಿರುವ ವಿಡಿಯೊ ಅನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ವಿಡಿಯೊ ಹಂಚಿಕೊಳ್ಳುತ್ತಿರುವ ಅನೇಕರು, ‘ಜಿಹಾದಿಗಳು ವ್ಯವಸ್ಥಿತವಾಗಿ ನಮ್ಮ ರೈಲ್ವೆಯನ್ನು ಧ್ವಂಸ ಮಾಡುತ್ತಿದ್ದಾರೆ’ ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ಎಕ್ಸ್ ವೇದಿಕೆಯಲ್ಲಿ ಈ ವಿಡಿಯೊ ಹಂಚಿಕೊಂಡಿದ್ದ ಬಳಕೆದಾರರೊಬ್ಬರ ಪೋಸ್ಟ್‌ಗೆ ಮಂಥಿರ ಮೂರ್ತಿ ಎನ್ನುವವರು ಪ್ರತಿಕ್ರಿಯಿಸಿದ್ದಾರೆ. ‘ರೈಲ್ವೆಯಲ್ಲಿ ಹಾನಿಗೊಳಗಾದ ಕಿಟಕಿ ಗಾಜನ್ನು ರಿಪೇರಿ ಮಾಡುವ ಕೆಲಸವು ನಿರಂತರವಾಗಿ ನಡೆಯುತ್ತಿರುತ್ತದೆ. ಇದು ಅಂಥದ್ದೇ ಒಂದು ರಿಪೇರಿ ಕೆಲಸದ ವಿಡಿಯೊ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಹಲವು ನಿವೃತ್ತ ರೈಲ್ವೆ ಸಿಬ್ಬಂದಿ ಕೂಡ ಇದನ್ನು ಖಚಿತಪಡಿಸಿದ್ದಾರೆ. ಮೂರ್ತಿ ಅವರು ರೈಲ್ವೆ ಇಲಾಖೆಯಲ್ಲಿ ಹಿರಿಯ ಸೆಕ್ಷನ್ ಇಂಜಿನಿಯರ್ ಆಗಿದ್ದು, ತಮಿಳುನಾಡಿನ ತಿರುನೆಲ್ವೇಲಿ ಜಂಕ್ಷನ್‌ನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಉಸ್ತುವಾರಿ ಆಗಿದ್ದಾರೆ. ಇನ್ನು ವಿಡಿಯೊದಲ್ಲಿ ವಂದೇ ಭಾರತ್ ರೈಲಿನ ಕಿಟಕಿಯ ಗಾಜು ಒಡೆಯುತ್ತಿರುವ ವ್ಯಕ್ತಿಯು ರಿಪೇರಿ ಕೆಲಸದಲ್ಲಿ ತೊಡಗಿರುವುದಾಗಿ ರೈಲ್ವೆ ಇಲಾಖೆ ಖಚಿತಪಡಿಸಿದೆ. ಈ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.