ADVERTISEMENT

Fact Check: ಮನಮೋಹನ್ ಸಿಂಗ್ ಮೋದಿಯನ್ನು ಹೊಗಳಿ ಟ್ವೀಟ್ ಮಾಡಿದರು ಎಂಬುದು ಸುಳ್ಳು

ಫ್ಯಾಕ್ಟ್ ಚೆಕ್
Published 30 ಜನವರಿ 2024, 23:30 IST
Last Updated 30 ಜನವರಿ 2024, 23:30 IST
   

‘ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನನಗೆ ಹೆಮ್ಮೆ ಇದೆ. ಅವರು ದೇಶಕ್ಕಾಗಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ನಾನು ಪ್ರಧಾನಿಯಾಗಿದ್ದಾಗ ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಬಿಡುತ್ತಿರಲಿಲ್ಲ. ಆದರೆ ನನಗೆ ಈಗ ಅಂತಹ ಭಯವಿಲ್ಲ. ಹೀಗಾಗಿ ಈ ಸತ್ಯವನ್ನು ಹೇಳುತ್ತಿದ್ದೇನೆ. ನರೇಂದ್ರ ಮೋದಿ ಅವರು ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಪ್ರಧಾನಿ’ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ‘@manmohan_5 ಹ್ಯಾಂಡಲ್‌ನಿಂದ ಮನಮೋಹನ್‌ ಸಿಂಗ್ ಈ ಟ್ವೀಟ್‌ (ಎಕ್ಸ್‌ಪೋಸ್ಟ್‌) ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದು ಸುಳ್ಳು ಸುದ್ದಿ.

‘ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಇಂತಹ ಸ್ವೀಟ್‌ ಮಾಡಿಲ್ಲ. ‘@manmohan_5 ಹ್ಯಾಂಡಲ್, ಮನಮೋಹನ್‌ ಸಿಂಗ್ ಅವರ ಎಕ್ಸ್‌ ಖಾತೆಗೆ ಸಂಬಂಧಿಸಿದ್ದಲ್ಲ. ‘@manmohan_5 ಹ್ಯಾಂಡಲ್‌ನಿಂದ ಈ ಹಿಂದೆಯೂ ಹಲವು ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಲಾಗಿತ್ತು. ಈ ಖಾತೆಗೆ ಡಿಸ್‌ಪ್ಲೇ ಚಿತ್ರವಿಲ್ಲ ಮತ್ತು ವೆರಿಫೈಡ್‌ ಚಿಹ್ನೆಯೂ ಇಲ್ಲ. ಇದೊಂದು ನಕಲಿ ಖಾತೆ ಎಂದು 2021ರಲ್ಲೇ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಈ ಹ್ಯಾಂಡಲ್‌ನಲ್ಲಿ ಪ್ರಕಟವಾಗಿದ್ದ ಎಲ್ಲಾ ಪೋಸ್ಟ್‌ಗಳನ್ನು ಈಗ ಡಿಲೀಟ್ ಮಾಡಲಾಗಿದೆ. ಈ ಹ್ಯಾಂಡಲ್‌ ಅನ್ನು ಬಳಸಿಕೊಂಡು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಹೆಸರಿನಲ್ಲಿ ಯಾರೋ ಸುಳ್ಳು ಸುದ್ದಿ ಸೃಷ್ಟಿಸುತ್ತಿದ್ದಾರೆ’ ಎಂದು ಆಲ್ಟ್‌ನ್ಯೂಸ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT