2016ರ ನವೆಂಬರ್ 8ರಂದು ಕೇಂದ್ರ ಸರ್ಕಾರವು ₹500 ಹಾಗೂ ₹1,000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿ, ಚಲಾವಣೆಯಿಂದ ಹಿಂದಕ್ಕೆ ಪಡೆದಿತ್ತು. ಇದಾದ ಬಳಿಕ, ₹2,000 ಮುಖಬೆಲೆಯ ನೋಟುಗಳನ್ನು ಹೊಸದಾಗಿ ಪರಿಚಯಿಸಿತ್ತು. ₹1,000 ಮುಖಬೆಲೆಯ ನೋಟುಗಳು 2023ರ ಜನವರಿ 1ರಿಂದ ಮತ್ತೆ ಚಲಾವಣೆಗೆ ಬರಲಿವೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಚಲಾವಣೆ ಕಡಿಮೆಯಾಗಿರುವ ₹2,000 ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗಳು ವಾಪಸ್ ಪಡೆಯಲಿವೆ ಎಂಬ ಸುದ್ದಿಯೂ ಚರ್ಚೆಯಲ್ಲಿದೆ. ಆದರೆ ಈ ಸುದ್ದಿ ಸುಳ್ಳು.
ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಮತ್ತೆ ಪರಿಚಯಿಸುವ ಉದ್ದೇಶ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಪಿಐಬಿ ಫ್ಯಾಕ್ಟ್‌ಚೆಕ್ ವೇದಿಕೆ ಸ್ಪಷ್ಟಪಡಿಸಿದೆ. ಆದರೆ, ₹2,000 ಮುಖಬೆಲೆಯ ನೋಟನ್ನು ರದ್ದುಪಡಿಸುವ ಉದ್ದೇಶವೂ ಇಲ್ಲ ಎಂದು ಪಿಐಬಿ ತಿಳಿಸಿದೆ.₹2,000 ಮುಖಬೆಲೆಯ ನೋಟುಗಳ ಮುದ್ರಣವುಮೂರು ವರ್ಷಗಳಿಂದ ಸ್ಥಗಿತವಾಗಿದೆ ಎಂದು ಆರ್‌ಟಿಐನಡಿ ಮಾಹಿತಿ ದೊರಕಿತ್ತು. 2018–19ರ ಬಳಿಕ ₹2,000ದ ನೋಟುಗಳ ಮುದ್ರಣಕ್ಕೆ ಬೇಡಿಕೆ ಸಲ್ಲಿಕೆಯಾಗಿಲ್ಲ ಎಂದು ಕೇಂದ್ರ ಸರ್ಕಾರವು ಸದನಕ್ಕೆ ಮಾಹಿತಿ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.