ಬೆಂಗಳೂರು: ಮಾಧ್ಯಮಗಳ ವಿರುದ್ಧಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ವಿದ್ಯಾರ್ಥಿಗಳು ಘೋಷಣೆ ಕೂಗುತ್ತಿರುವ ದೃಶ್ಯದ ಸ್ಕ್ರೀನ್‌ಶಾಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಜೀ ನ್ಯೂಸ್ ಬುಲೆಟಿನ್‌ನ ವಿಡಿಯೊ ದೃಶ್ಯ ಇದಾಗಿದ್ದು '43 ವರ್ಷದ ಮಹಿಳೆ ಜೆಎನ್‌ಯುವಿನಲ್ಲಿ ವಿದ್ಯಾರ್ಥಿನಿ. ಅಚ್ಚರಿಯೇನೆಂದರೆ ಆಕೆಯ ಮಗಳು ಮೋನಾ ಕೂಡಾ ಜೆಎನ್‌ಯು ವಿದ್ಯಾರ್ಥಿನಿ' ಎಂಬ ಒಕ್ಕಣೆಯೊಂದಿಗೆ ಈ ಸ್ಕ್ರೀನ್‌ಶಾಟ್ ವೈರಲ್ ಆಗಿದೆ.
ಮಾಧ್ಯಮ ಪ್ರತಿನಿಧಿಯೊಂದಿಗೆ ಸಂವಾದ ನಡೆಸುತ್ತಿರುವ ಫೋಟೊ ಅದು.
ಜೆಎನ್‌ಯು ಹಾಸ್ಟೆಲ್ ಶುಲ್ಕ ಏರಿಕೆ ಮಾಡಿದ್ದಕ್ಕಾಗಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುವುದಕ್ಕಾಗಿ ಉನ್ನತ ಮಟ್ಟದ ಸಮಿತಿ ರೂಪಿಸಲಾಗುವುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಹೇಳಿದೆ.
ಸೋಮವಾರವೂ ಜೆಎನ್‌ಯು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಹಾಸ್ಟೆಲ್ ಶುಲ್ಕವನ್ನುಈಗಜೆಎನ್‌ಯು ಕಡಿಮೆ ಮಾಡಿದೆ. ಆದರೆ ಶುಲ್ಕ ಏರಿಕೆ ಮಾಡಿರುವ ನಿರ್ಧಾರವನ್ನು ಸಂಪೂರ್ಣವಾಗಿವಾಪಸ್ ತೆಗೆದುಕೊಳ್ಳಲೇ ಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮುಂದುವರಿದಿದೆ.
ಏತನ್ಮಧ್ಯೆ, ಜೆಎನ್‌ಯುವಿನಲ್ಲಿ 43ರ ಹರೆಯದ ವಿದ್ಯಾರ್ಥಿನಿ ಎಂದು ಹೇಳಲಾಗುತ್ತಿರುವ ವೈರಲ್ ಪೋಸ್ಟ್ ಬಗ್ಗೆ ಬೂಮ್‌ಲೈವ್ ಫ್ಯಾಕ್ಟ್‌ಚೆಕ್ ಮಾಡಿದೆ.
ಫ್ಯಾಕ್ಟ್‌ಚೆಕ್
ವೈರಲ್ ಆಗಿರುವ ಸ್ಕ್ರೀನ್‌ಶಾಟ್ ಜೀನ್ಯೂಸ್‌ನಲ್ಲಿ ಪ್ರಸಾರವಾಗುವ ಡಿಎನ್‌ಎ ಎನಾಲಿಸಿಸ್ ಕಾರ್ಯಕ್ರಮದ್ದಾಗಿದೆ. ನವೆಂಬರ್ 15ರಂದು ಪ್ರಸಾರವಾದ ಈ ಕಾರ್ಯಕ್ರಮದಲ್ಲಿ ಪ್ರತಿಭಟನೆ ವೇಳೆ ಅಲ್ಲಿ ಸುದ್ದಿ ಮಾಡುತ್ತಿದ್ದ ಜೀನ್ಯೂಸ್ ಪತ್ರಕರ್ತರೊಂದಿಗೆ ವಿದ್ಯಾರ್ಥಿಗಳುಅಸಭ್ಯವಾಗಿ ವರ್ತಿಸಿದ್ದಾರೆಎಂದು ಹೇಳಲಾಗಿತ್ತು. ಕಾರ್ಯಕ್ರಮದ ವಿಡಿಯೊ ನೋಡಿದರೆ 1.58ನೇನಿಮಿಷದ ನಂತರವೈರಲ್ ಫೋಸ್ಟ್‌ನಲ್ಲಿ ಉಲ್ಲೇಖಿಸಿರುವ ಮಹಿಳೆಯನ್ನು ಕಾಣಬಹುದಾಗಿದೆ.
ಈ ವಿಡಿಯೊದಲ್ಲಿರುವ ಮಹಿಳೆಯ ಹೆಸರು ಶಾಂಭವಿ ಸಿದ್ದಿ. ಜೆಎನ್‌ಯುವಿನ ಫ್ರೆಂಚ್ ವಿಭಾಗದಲ್ಲಿ ಈಕೆ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯಾಗಿದ್ದಾರೆ. ಬೂಮ್ ತಂಡ ಸಿದ್ಧಿ ಅವರನ್ನು ಸಂಪರ್ಕಿಸಿದಾಗ, ಈ ಫೋಟೊದಲ್ಲಿರುವುದು ನಾನೇ ಎಂದು ಆಕೆ ಹೇಳಿಕೊಂಡಿದ್ದಾರೆ. ಮಾಧ್ಯಮಗಳ ವಿರುದ್ಧ ನಾನು ಘೋಷಣೆ ಕೂಗುತ್ತಿದ್ದೆ ಎಂದು ಅವರು ಹೇಳಿದ್ದಾರೆ.
ಅಂದಹಾಗೆ ವೈರಲ್ ಪೋಸ್ಟ್‌ನಲ್ಲಿ ಹೇಳಿದಂತೆ ಸಿದ್ದಿ ವಯಸ್ಸು 43 ಅಲ್ಲ, 23. ಇದನ್ನು ಆಕೆಯೇ ಹೇಳಿಕೊಂಡಿದ್ದಾರೆ.
ಜೆಎನ್‌ಯು ಪ್ರತಿಭಟನೆಗೆ ಸಂಬಂಧಿಸಿ ಹಲವಾರು ಫೇಕ್ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.