ಬ್ರೆಡ್‌ಗಳನ್ನು ಪ್ಯಾಕ್ ಮಾಡುವಾಗ ಯುವಕನೊಬ್ಬ ಬೆರಳನ್ನು ನೆಕ್ಕುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. SpitJihad ಹ್ಯಾಷ್‌ಟ್ಯಾಗ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಭಾರತದಲ್ಲಿ ನಡೆದಿರುವ ವಿದ್ಯಮಾನ ಇದಾಗಿದ್ದು, ಮನೆಗೆ ಬ್ರೆಡ್ ಪ್ಯಾಕ್ ತಂದೊಡನೆ ಅದಕ್ಕೆ ಸ್ಯಾನಿಟೈಸರ್ ಸಿಂಪಡಣೆ ಮಾಡಿ ಎಂದೂ ಅಡಿಬರಹ ಬರೆದು ಶೇರ್ ಮಾಡಲಾಗುತ್ತಿದೆ.
ವಿಡಿಯೊವನ್ನು ಪರಿಶೀಲನೆಗೆ ಒಳಪಡಿಸಲಾಗಿದ್ದು, ಅದು ಭಾರತದ್ದಲ್ಲ ಎನ್ನುವುದು ಸಾಬೀತಾಗಿದೆ. ಅಲ್ಲದೆ, ಕೊರೊನಾಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವುದು ಸಹ ಗೊತ್ತಾಗಿದೆ. ಫಿಲಿಪ್ಪೀನ್ಸ್‌ನಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ತೆಗೆದಿದ್ದ ವಿಡಿಯೊವನ್ನು ಈ ರೀತಿ ತಪ್ಪು ಮಾಹಿತಿಯನ್ನು ಹರಡಲು ಬಳಸಲಾಗಿದೆ. ಇಂಡಿಯಾ ಟುಡೆ ಕೂಡ ಈ ಸತ್ಯಾಂಶದ ಮೇಲೆ ಬೆಳಕು ಚೆಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.