ನವದೆಹಲಿ:'ತಾಂತ್ರಿಕ ದೋಷದಿಂದಾಗಿ ರಫೇಲ್ ಜೆಟ್ ಅಪಘಾತಕ್ಕೀಡಾಗಿದೆ' ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವುದು ಸುಳ್ಳು ಸುದ್ದಿ ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೊ (ಪಿಐಬಿ) ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪಿಐಬಿ, ‘ಅಂಬಾಲ ವಾಯನೆಲೆ ಬಳಿ ತಾಂತ್ರಿಕ ದೋಷ ಕಾಣಿಸಿಕೊಂಡು ರಫೇಲ್ ಜೆಟ್ ಯುದ್ಧ ವಿಮಾನವು ಅಪಘಾತಕ್ಕೀಡಾಗಿದೆ ಹಾಗೂ ಒಬ್ಬರು ಫೈಲಟ್ ಹುತಾತ್ಮರಾಗಿದ್ದಾರೆ ಎಂದು ಭಾರತೀಯ ವಾಯು ಸೇನೆ ಟ್ವೀಟ್ ಮಾಡಿದೆ ಎಂದು ಹೇಳಲಾಗಿದೆ.ಈ ಮಾಹಿತಿ ಇರುವ ಚಿತ್ರವು ಎಡಿಟ್ ಮಾಡಿರುವುದಾಗಿದೆ.ಭಾರತೀಯ ವಾಯುಸೇನೆಯು ಅಂತಹ ಯಾವುದೇ ಟ್ವೀಟ್ ಮಾಡಿಲ್ಲ ಮತ್ತು ಅಂತಹ ಯಾವುದೇ ಘಟನೆ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.