ADVERTISEMENT

ವೈಮಾನಿಕ ದಾಳಿ: ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದು ಹಳೇ ವಿಡಿಯೊವೊಂದರ ತುಣುಕು!

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2019, 15:43 IST
Last Updated 26 ಫೆಬ್ರುವರಿ 2019, 15:43 IST
   

ಬೆಂಗಳೂರು: ಪಾಕಿಸ್ತಾನದ ಬಲಾಕೋಟ್‍ನಲ್ಲಿ ಭಾರತೀಯ ವಾಯುಪಡೆ ಜೈಷ್- ಎ- ಮೊಹಮ್ಮದ್ ಉಗ್ರ ಸಂಘಟನೆಗಳ ಶಿಬಿರಗಳ ಮೇಲೆ ಫೆ.26 ಮುಂಜಾನೆ 3.30ಕ್ಕೆವೈಮಾನಿಕ ದಾಳಿ ನಡೆಸಿದೆ.ಗಡಿ ನಿಯಂತ್ರಣ ರೇಖೆಯಿಂದಾಚೆ ಭಾರತ ನಡೆಸಿದ ಈ ವೈಮಾನಿಕ ದಾಳಿ ಬಗ್ಗೆ ಹಲವಾರು ಫೇಕ್ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಅದರೊಂದಿಗೆಕೆಲವು ಸುದ್ದಿ ವಾಹಿನಿಗಳು ಬಲಾಕೋಟ್‍ನಲ್ಲಿ ನಡೆದ ವೈಮಾನಿಕ ದಾಳಿ ಎಂದು ತೋರಿಸುತ್ತಿರುವ ವಿಡಿಯೊ ದೃಶ್ಯಗಳು ಕೂಡಾ ನಿಜವಾದುದಲ್ಲ.ಅದು ಹಳೇ ವಿಡಿಯೊವೊಂದರ ತುಣುಕು ಎಂಬುದನ್ನುಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿ ವರದಿ ಮಾಡಿದೆ.

ಈ ಬಗೆಯ ವಿಡಿಯೊಗಳನ್ನು ಭಾರತೀಯ ವಾಯುಪಡೆ ಅಧಿಕೃತವಾಗಿ ಬಿಡುಗಡೆ ಮಾಡದ ಹೊರತಾಗಿ ಮಾಧ್ಯಮಗಳಿಗೆ ಸಿಗುವ ಸಾಧ್ಯತೆ ಕಡಿಮೆ. ವಿಡಿಯೊ ಬಿಡುಗಡೆ ಮಾಡುವುದು ರಾಷ್ಟ್ರೀಯ ಭದ್ರತೆ ಮತ್ತು ರಾಜತಾಂತ್ರಿಕ ನಿಲುವುಗಳಿಗೆ ಸಂಬಂಧಿಸಿದ ವಿಚಾರ. ಸೇನೆಯ ಭದ್ರತಾ ವ್ಯವಸ್ಥೆಯನ್ನು ಮೀರಿ ಈ ವಿಡಿಯೊಗಳು ಸೋರಿಕೆಯಾಗುವುದು ಬಹುತೇಕ ಅಸಾಧ್ಯ. ಈ ತನಕ ರಕ್ಷಣಾ ಇಲಾಖೆ ಭಾರತೀಯ ವಾಯುಪಡೆ ಅಥವಾ ವಿದೇಶಾಂಗ ಸಚಿವಾಲಯ ದಾಳಿಯ ವಿಡಿಯೊಗಳನ್ನುಬಹಿರಂಗ ಪಡಿಸಿಲ್ಲ.

ADVERTISEMENT

'ವೀಕ್ಷಕರೇ, ಭಾರತೀಯ ವಾಯುಪಡೆ ಜೈಷೆ ಉಗ್ರರಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸುತ್ತಿರುವ ದೃಶ್ಯಗಳನ್ನು ನೀವು ಈಗ ಟೀವಿ ಪರದೆ ಮೇಲೆ ನೋಡುತ್ತಿರುವಿರಿ. ಈ ದಾಳಿಯಲ್ಲಿ ಸಂಭವಿಸಿದ ನಾಶನಷ್ಟಗಳ ಬಗ್ಗೆ ಇಲ್ಲಿಯವರೆಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ದಾಳಿಯ ದೃಶ್ಯಗಳು ಇಲ್ಲಿವೆ ಎಂದು ಹೇಳಿ ನ್ಯೂಸ್ 18 ಸುದ್ದಿ ವಾಹಿನಿ ಈವಿಡಿಯೊವೊಂದನ್ನು ಪ್ರಸಾರ ಮಾಡಿದೆ.

ಇದೇ ವಿಡಿಯೊವನ್ನು ಇಂಡಿಯಾ ಟುಡೇ, ಎಕನಾಮಿಕ್ ಟೈಮ್ಸ್, ಆಜ್ ತಕ್, ಟೈಮ್ಸ್ ನೌ ಮತ್ತುನ್ಯೂಸ್ 18 ಸುದ್ದಿಯಲ್ಲಿ ಬಳಸಿದೆ.ಜಿಯೊಟೀವಿಯ ಟ್ವಿಟರ್ ಖಾತೆಯಲ್ಲಿಯೂ ಈ ವಿಡಿಯೊ ಶೇರ್ ಆಗಿತ್ತು. ಆದರೆನ್ಯೂಸ್ 18 ಮತ್ತು ಜಿಯೊ ಟೀವಿ ಈ ಟ್ವೀಟ್ ಅಳಿಸಿದೆ.

ವಿಡಿಯೊದಲ್ಲಿ ಏನಿದೆ?
ಈ ವಿಡಿಯೊದಲ್ಲಿಫೈಟರ್ ಜೆಟ್ ವಿಮಾನವೊಂದು ಬೆಂಕಿಯುಗುಳುತ್ತಾ ಮೇಲೆ ಚಿಮ್ಮುತ್ತಿದೆ. ಇದುಟಿವಿಸುದ್ದಿ ನಿರೂಪಕರು ಹೇಳುವಂತೆ ಬಲಾಕೋಟ್ ಪ್ರದೇಶದಲ್ಲಿರುವ ಜೈಷೆ ಉಗ್ರರ ಶಿಬಿರಗಳ ಮೇಲೆ ಫೆ. 26 ಮುಂಜಾನೆ 3.30ರ ವೇಳೆಗೆ ಭಾರತೀಯ ವಾಯುಪಡೆಯ ಜೆಟ್ ವಿಮಾನಗಳು 1000 ಕಿ.ಗ್ರಾಂ ತೂಕದ ಬಾಂಬ್ ಹಾಕುತ್ತಿರುವ ದೃಶ್ಯ ಅಲ್ಲ.

ಚಕ್ರವರ್ತಿ ಸೂಲಿಬೆಲೆ ಅವರ ಟ್ವಿಟರ್ಖಾತೆಯಲ್ಲಿಶೇರ್ ಆಗಿರುವ ಈ ವಿಡಿಯೊವನ್ನು 2,600ಕ್ಕಿಂತಲೂ ಹೆಚ್ಚು ಜನ ಲೈಕ್ ಮಾಡಿದ್ದು,691 ಮಂದಿ ಶೇರ್ ಮಾಡಿದ್ದಾರೆ.

The India Eye ಎಂಬ ಫೇಸ್‍ಬುಕ್‍ ಪುಟದಲ್ಲಿ ಶೇರ್ ಆಗಿರುವ ಈ ವಿಡಿಯೊವನ್ನು 294, 452 ಮಂದಿ ವೀಕ್ಷಿಸಿದ್ದಾರೆ.

ವಿಡಿಯೊದ ಸತ್ಯಾಸತ್ಯತೆ ಏನು?

ಈ ವಿಡಿಯೊ 2017ರಲ್ಲಿ ಯೂಟ್ಯೂಬ್ ಚಾನೆಲ್‍ವೊಂದಲ್ಲಿ ‘Flares at night Paf F-16’ ಎಂಬ ಶೀರ್ಷಿಕೆಯಲ್ಲಿ ಶೇರ್ ಆಗಿದೆ.ಈ ವಿಡಿಯೊದಲ್ಲಿ 0.34 ನಿಮಿಷದ ನಂತರದ ದೃಶ್ಯ ಭಾಗಗಳನ್ನು ಗಮನಿಸಿ. ಇದೇ ವಿಡಿಯೊ ತುಣುಕುಗಳು ಬಲಾಕೋಟ್ ವೈಮಾನಿಕ ದಾಳಿಯ ಮೊದಲ ದೃಶ್ಯಗಳು ಎಂಬ ಶೀರ್ಷಿಕೆಯಲ್ಲಿ ಹರಿದಾಡುತ್ತಿವೆ.

ಇದೇ ವಿಡಿಯೊ Fans Of Imran khan ಎಂಬ ಫೇಸ್‍ಬುಕ್ ಪುಟದಲ್ಲಿ ಫೆ. 24ರಂದು ಶೇರ್ ಆಗಿದೆ.ಪಾಕ್ ಟ್ವೀಟಿಗರೊಬ್ಬರು ಇದೇ ವಿಡಿಯೊವನ್ನು ಫೆ. 25ರಂದು ಟ್ವೀಟಿಸಿ ಪಾಕಿಸ್ತಾನಿ ಫೈಟರ್ ಜೆಟ್‍ಗಳು ಚೊಲಿಸ್ತಾನ್ ಪ್ರದೇಶದಲ್ಲಿ ಮಿಲಿಟರಿ ತಾಲೀಮು ನಿರತರಾಗಿರುವುದು ಎಂದು ಬರೆದಿದ್ದಾರೆ.

ಇವುಗಳನ್ನೆಲ್ಲ ಗಮನಿಸಿದಾಗ ಈ ವಿಡಿಯೊ ಭಾರತೀಯ ವಾಯುಪಡೆ ಗಡಿಯಿಂದಾಚೆ ನಡೆಸಿದ ವೈಮಾನಿಕ ದಾಳಿಯ ದೃಶ್ಯ ಅಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತದೆ.2017ರಲ್ಲಿಯೇ ಈ ವಿಡಿಯೊ ಅಪ್‍ಲೋಡ್ ಆಗಿರುವುದರಿಂದ ಇದು ಬಾಲಕೋಟ್ ವೈಮಾನಿಕ ದಾಳಿಯದ್ದೂ ಅಲ್ಲ.


ಪಾಕಿಸ್ತಾನದ ಮಾಧ್ಯಮಗಳು ಹೇಳುತ್ತಿರುವುದೇನು?

ಇದೇ ವಿಡಿಯೊ ದೃಶ್ಯವನ್ನು ಪಾಕಿಸ್ತಾನದ ಮಾಧ್ಯಮಗಳೂ ಬಳಸಿಕೊಂಡಿವೆ.ಫೆ. 26 ಬೆಳಗ್ಗೆ 6ಗಂಟೆಗೆ ಪಾಕ್ ಟ್ವೀಟಿಗರೊಬ್ಬರು ಆ ವಿಡಿಯೊವನ್ನು ಶೇರ್ ಮಾಡಿ,ಭಾರತದ ವೈಮಾನಿಕ ದಾಳಿಗೆ ಪಾಕ್ ಪ್ರತಿಕ್ರಿಯೆ ಹೀಗಿತ್ತು ಎಂದು ಟ್ವೀಟಿಸಿದ್ದಾರೆ. 2019 ಫೆ. 26ರಂದು ಬೆಳಗ್ಗೆ ಪಾಕ್ ಪತ್ರಕರ್ತರೊಬ್ಬರು ಈ ವಿಡಿಯೊವನ್ನು ಶೇರ್ ಮಾಡಿದ್ದಾರೆ.

ಒಟ್ಟಿನಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‍ಲೋಡ್ ಆದವಿಡಿಯೊವನ್ನು ಪರಾಂಬರಿಸಿ ನೋಡದೆ ಭಾರತದ ಮಾಧ್ಯಮಗಳು ಬಲಾಕೋಟ್ ವೈಮಾನಿಕ ದಾಳಿಯ ವಿಡಿಯೊ ಎಂದುಪ್ರಸಾರ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.