ಕೋವಿಡ್‌ನಿಂದ ದೇಶವಾಸಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಎಷ್ಟೋ ಜನರಿಗೆ ದೈನಂದಿನ ಜೀವನ ನಡೆಸುವುದೂ ಕಷ್ಟವಾಗಿದೆ. ಇದನ್ನು ಮನಗಂಡಿರುವ ಕೇಂದ್ರ ಸರ್ಕಾರವು ದೇಶದ ನಾಗರಿಕರಿಗೆ ಆರ್ಥಿಕ ಸೌಲಭ್ಯ ಕಲ್ಪಿಸುವ ಯೋಜನೆಯನ್ನು ಪ್ರಕಟಿಸಿದೆ. ‘ಪ್ರಧಾನಮಂತ್ರಿ ನಾರಿಶಕ್ತಿ ಯೋಜನೆ’ ಎಂಬ ಹೆಸರಿನಲ್ಲಿ ದೇಶದ ಎಲ್ಲ ಮಹಿಳೆಯರ ಬ್ಯಾಂಕ್ ಖಾತೆಗೆ ₹2.20 ಲಕ್ಷ ಹಣ ಜಮಾ ಮಾಡಲಿದೆ. ಕೋವಿಡ್‌ನಿಂದ ಉದ್ಯೋಗ ಕಳೆದುಕೊಂಡಿರುವ ಕುಟುಂಬಗಳಿಗೆ ಇದರಿಂದ ಒಂದಿಷ್ಟು ನೆರವಾಗಲಿದೆ. – ಈ ಮಾಹಿತಿ ಒಳಗೊಂಡ ವಿಡಿಯೊವೊಂದು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿದೆ. ಇದನ್ನು ನೂರಾರು ಜನರು ಶೇರ್ ಮಾಡಿಕೊಂಡಿದ್ದಾರೆ.
ಪಿಐಬಿ ಫ್ಯಾಕ್ಟ್‌ಚೆಕ್ ತಂಡವಿಡಿಯೊ ಪರಿಶೀಲನೆ ನಡೆಸಿದೆ. ಕೇಂದ್ರ ಸರ್ಕಾರದಲ್ಲಿ ‘ಪ್ರಧಾನಮಂತ್ರಿ ನಾರಿಶಕ್ತಿ ಯೋಜನೆ’ ಎಂಬ ಹೆಸರಿನ ಯೋಜನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದೆ. ಇದು ದಾರಿತಪ್ಪಿಸುವ ವಿಡಿಯೊ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.