ADVERTISEMENT

'ನಾನು ಲಂಡನ್‌ಗೆ ಹೋಗಿ ನೆಲೆಸುತ್ತೇನೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆಯೇ?

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 16:26 IST
Last Updated 14 ಅಕ್ಟೋಬರ್ 2019, 16:26 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ    

ನವದೆಹಲಿ:'ಏನೂ ಆಗುವುದಿಲ್ಲ, ನಾನು ಲಂಡನ್‌ಗೆ ಹೋಗುತ್ತೇನೆ. ನನ್ನ ಮಕ್ಕಳು ಅಮೆರಿಕಗೆ ಹೋಗಿ ಕಲಿಯುತ್ತಾರೆ. ಹಿಂದೂಸ್ತಾನದೊಂದಿಗೆ ನನಗೆ ಯಾವುದೇ ನಂಟು ಇಲ್ಲ. ನನ್ನಲ್ಲಿ ಸಾವಿರ ಕೋಟಿ ಹಣವಿದೆ. ನಾನು ಯಾವಾಗ ಬೇಕಾದರೂ ಹೋಗುವೆ' - ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಈ ರೀತಿ ಹೇಳುತ್ತಿರುವ 11 ಸೆಕೆಂಡ್ ಅವಧಿಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಬಿಜೆಪಿಯ ಸಾಮಾಜಿಕ ಮಾಧ್ಯಮದ ಉಸ್ತುವಾರಿ ವಹಿಸಿರುವಪ್ರೀತಿ ಗಾಂಧಿಈ ವಿಡಿಯೊವನ್ನು ಟ್ವೀಟಿಸಿದ್ದರು.

ಅಕಾಲಿದಳ ಶಾಸಕ ಮಂಜಿಂದರ್ ಎಸ್ ಸಿರ್ಸಾ ಕೂಡಾ ಇದೇ ವಿಡಿಯೊವನ್ನು ಟ್ವೀಟಿಸಿದ್ದು, ಇದೇ ಕಾರಣಕ್ಕಾಗಿ ಭಾರತದ ಜನರು ನಿನ್ನನ್ನು ಇಷ್ಟಪಡುವುದಿಲ್ಲ ಎಂದಿದ್ದಾರೆ. ಸಿರ್ಸಾ ಅವರ ಟ್ವೀಟ್ 926 ಬಾರಿ ರಿಟ್ವೀಟ್ ಆಗಿದೆ.

ADVERTISEMENT

ಇದು ಗಾಂಧಿ ಕುಟುಂಬದ ನಿಜವಾದ ಮುಖ. ಜನರು ತಮ್ಮ ಅಪ್ಪನ ಆಸ್ತಿ ಎಂದು ಇವರು ಅಂದುಕೊಂಡಿದ್ದಾರೆ. ನಾನು ಲಂಡನ್‌ಗೆ ಹೋಗುತ್ತೇನೆ, ನನ್ನ ಮಕ್ಕಳು ಅಮೆರಿಕಾದಲ್ಲಿ ಕಲಿಯುತ್ತಾರೆ ಎಂದು ಬೆದರಿಕೆ ಹಾಕ್ತಾರೆ. ಅವರನ್ನು ಇವತ್ತೇ ಲಂಡನ್‌ಗೆ ಕಳಿಸಿ. ಇದಕ್ಕಿಂತ ಅವರನ್ನು ಅವರ ನಿಜವಾದ ಮನೆ ಪಾಕಿಸ್ತಾನಕ್ಕೆ ಕಳಿಸುವುದು ಒಳ್ಳೆಯದು ಎಂಬ ವಿವರಣೆಯೊಂದಿಗೆ ಫೇಸ್‌ಬುಕ್‌ನಲ್ಲಿ ಇದೇ ವಿಡಿಯೊ ಶೇರ್ ಆಗಿದೆ.

ವೈರಲ್ ಆಗಿದ್ದು ಭಾಷಣದ ತುಣುಕು
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊ ತುಣುಕು ರಾಹುಲ್ ಗಾಂಧಿ ಅಕ್ಟೋಬರ್ 13 ರಂದು ಮಹಾರಾಷ್ಟ್ರದ ಲಾಥೂರ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾಡಿದ ಭಾಷಣದ್ದಾಗಿದೆ.

ಫ್ಯಾಕ್ಟ್‌ಚೆಕ್

ವೈರಲ್ ವಿಡಿಯೊ ಬಗ್ಗೆ ಆಲ್ಟ್‌ನ್ಯೂಸ್ಫ್ಯಾಕ್ಟ್‌ಚೆಕ್ ಮಾಡಿದೆ.

ಭಾಷಣದಲ್ಲಿ ರಾಹುಲ್, ಉದ್ಯಮಿಗಳಾದ ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಬಗ್ಗೆ ಉಲ್ಲೇಖಿಸಿದರು. ಈ ಇಬ್ಬರು ಉದ್ಯಮಿಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ₹14,000 ಕೋಟಿ ಹಗರಣದಆರೋಪ ಹೊತ್ತಿದ್ದಾರೆ.

ಭಾಷಣದ ವಿಡಿಯೊದ 15: 10 ನಿಮಿಷದಲ್ಲಿ ರಾಹುಲ್ ಈ ರೀತಿ ಹೇಳುತ್ತಾರೆ.

''ನೀರವ್ ಮೋದಿ, ಮೆಹುಲ್ ಚೋಕ್ಸಿ ಅವರು ಯಾವುದೇ ಭಯ ಇಲ್ಲದೆ ಒಳ್ಳೆಯ ನಡೆ ಸ್ವೀಕರಿಸಿದ್ದಾರೆ.ಏನೂ ಆಗಲ್ಲ, ನಾನು ಲಂಡನ್‌ಗೆ ಹೋಗಿ ಬಿಡುತ್ತೇನೆ. ನನ್ನ ಮಕ್ಕಳು ಅಮೆರಿಕಗೆ ಹೋಗಿ ಕಲಿಯುತ್ತಾರೆ. ನನಗೆ ಭಾರತದೊಂದಿಗೆ ಯಾವುದೇ ನಂಟು ಇಲ್ಲ. ನಾನು ನರೇಂದ್ರ ಮೋದಿಯ ಗೆಳೆಯ. ನನ್ನಲ್ಲಿ ಸಾವಿರ ಕೋಟಿ ಹಣವಿದೆ. ನಾನು ಯಾವಾಗ ಬೇಕಾದರೂ ಹೋಗಿಬಿಡಬಹುದು. ಇದು ಭಾರತದಲ್ಲಿ ನೈಜ ಚಿತ್ರಣ''

ರಾಹುಲ್ ಅವರು ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಎಂದು ಹೇಳಿರುವ ವಾಕ್ಯ ಮತ್ತು ನಾನು ನರೇಂದ್ರ ಮೋದಿಯವರ ಗೆಳೆಯ ಎಂಬ ವಾಕ್ಯವನ್ನು ಕತ್ತರಿಸಿ ವಿಡಿಯೊ ಎಡಿಟ್ ಮಾಡಲಾಗಿದೆ. ಹಾಗಾಗಿ ಈ ವಿಡಿಯೊ ತುಣುಕಿನಲ್ಲಿರುವ ಮಾತುಗಳು ರಾಹುಲ್ ಗಾಂಧಿ ಭಾರತ ತೊರೆದು ವಿದೇಶದಲ್ಲಿ ನೆಲೆಸುತ್ತಾರೆ ಎಂಬ ಅರ್ಥ ಹೊಮ್ಮಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.