‘ಯುವಜನರು ಉದ್ದಿಮೆ ಆರಂಭಿಸಲು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿ ₹ 10 ಲಕ್ಷದ ಸಾಲವನ್ನು ನೀಡಲಾಗುತ್ತಿದೆ. ದೇಶದ ಎಲ್ಲ ಯುವಕರಿಗೂ ಈ ಯೋಜನೆ ಅಡಿ ಸಾಲ ನೀಡಲಾಗುತ್ತದೆ. ಅರ್ಹರಿಗೆ ಈಗಾಗಲೇ ಸಾಲ ಮಂಜೂರಾಗಿದೆ. ಈ ಪೋಸ್ಟ್‌ನಲ್ಲಿ ಇರುವ ಲಿಂಕ್ ಅನ್ನು ಕ್ಲಿಕ್ ಮಾಡಿ, ಅರ್ಜಿ ಹಾಕಿ. ಜತೆಗೆ ಅರ್ಜಿ ಶುಲ್ಕ ಮತ್ತು ಪ್ರಕ್ರಿಯಾ ಶುಲ್ಕವಾಗಿ ₹4,500 ಅನ್ನು ಲಿಂಕ್‌ನಲ್ಲಿ ಸೂಚಿಸಿರುವ ಖಾತೆಗೆ ಜಮೆ ಮಾಡಿ. ಒಂದೇ ದಿನದಲ್ಲಿ ನಿಮ್ಮ ಖಾತೆಗೆ ₹ 10 ಲಕ್ಷ ಬರಲಿದೆ’ ಎಂಬ ವಿವರ ಇರುವ ಪೋಸ್ಟ್ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ.
‘ಈ ಪೋಸ್ಟ್‌ನಲ್ಲಿ ಇರುವ ವಿವರ ಸುಳ್ಳು. ಇದೊಂದು ಸುಳ್ಳು ಸುದ್ದಿ’ ಎಂದು ಪಿಐಬಿ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ಮುದ್ರಾ ಯೋಜನೆ ಅಡಿ ಯಾರಿಗೂ ಸಾಲವನ್ನು ಪೂರ್ವ ಮಂಜೂರು ಮಾಡಿರುವುದಿಲ್ಲ. ಇದಕ್ಕಾಗಿ ಅರ್ಜಿ ಶುಲ್ಕವಾಗಿ ₹4,500 ಸಂಗ್ರಹಿಸುತ್ತಿಲ್ಲ. ಈ ಲಿಂಕ್‌ನಲ್ಲಿರುವ ಖಾತೆಗೆ ಹಣ ಜಮೆ ಮಾಡಿ, ಹಣ ಕಳೆದುಕೊಳ್ಳಬೇಡಿ’ ಎಂದು ಪಿಐಬಿ ತನ್ನ ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.