ಗೋವಾದ ಕಡಲತೀರಗಳಲ್ಲಿ ಮದ್ಯ ಸೇವನೆಗೆ ಅಲ್ಲಿನ ಸರ್ಕಾರ ನಿರ್ಬಂಧ ಹೇರಿದೆ ಎನ್ನಲಾದ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನಿಯಮ ಉಲ್ಲಂಘಿಸಿ ಕಡಲತೀರಗಳಲ್ಲಿ ಮದ್ಯಸೇವಿಸಿದರೆ ₹5,000ದಿಂದ ₹50,000ವರೆಗೆ ದಂಡ ವಿಧಿಸಲು ಸರ್ಕಾರ ಮುಂದಾಗಿದೆ ಎಂದು ಪೋಸ್ಟರ್‌ನಲ್ಲಿ ಹೇಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ ಈ ಮಾಹಿತಿ ಸಂಪೂರ್ಣ ಸತ್ಯವಲ್ಲ.
ಕಡಲತೀರಗಳ ಬಯಲು ಪ್ರದೇಶಗಳು, ಪ್ರವಾಸಿ ತಾಣಗಳಲ್ಲಿ ಮದ್ಯ ಸೇವನೆ ಹಾಗೂಅಡುಗೆ ಮಾಡಲು ನಿರ್ಬಂಧವಿದೆ. 2013ರಿಂದಲೂ ಈ ನಿರ್ಬಂಧವಿದ್ದು, 2019ರ ಪ್ರವಾಸೋದ್ಯಮ ತಿದ್ದುಪಡಿ ಕಾಯ್ದೆಯಲ್ಲೂ ಇದನ್ನು ಉಲ್ಲೇಖಿಸಲಾಗಿದೆ. ಆದರೆ, ಕಡಲತೀರಗಳ ಶಾಕ್‌ನಲ್ಲಿ (ಕ್ಯಾಬಿನ್, ಮನೆಯಂತಹ ಸ್ಥಳ) ಮದ್ಯಸೇವನೆಗೆ ಯಾವುದೇ ಅಡ್ಡಿಯಿಲ್ಲ ಎಂದು ಕಾಯ್ದೆ ಹೇಳುತ್ತದೆ.ಗೋವಾದ ಪ್ರವಾಸಿ ತಾಣಗಳು ಹಾಗೂ ಕಡಲತೀರದ ಬಯಲು ಪ್ರದೇಶಗಳಲ್ಲಿ ಕಸ ಹಾಕುವುದು, ಅಡುಗೆ ಮಾಡುವುದು, ಬಾಟಲ್‌ಗಳನ್ನು ಒಡೆದುಹಾಕುವುದಕ್ಕೆ ನಿರ್ಬಂಧ ವಿಧಿಸಿ ಪ್ರವಾಸೋದ್ಯಮ ಕಾರ್ಯದರ್ಶಿ ನಿಖಿಲ್ ದೇಸಾಯಿ ಅವರು ಇದೇ ಅ.31ರಂದು ಆದೇಶ ಹೊರಡಿಸಿದ್ದಾರೆ. ಇದನ್ನೇ ತಪ್ಪಾಗಿ ಅರ್ಥೈಸಿ, ರಾಜ್ಯದ ಎಲ್ಲ ಕಡಲತೀರಗಳಲ್ಲೂ ಮದ್ಯಪಾನ ನಿಷೇಧಿಸಲಾಗಿದೆ ಎಂದು ಬಿಂಬಿಸಲಾಗಿದೆ ಎಂದು ‘ಲಾಜಿಕಲ್ ಇಂಡಿಯನ್’ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.