‘1991ರಲ್ಲಿ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದರು, ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದರು. ಆಗ 47 ಟನ್‌ಗಳಷ್ಟು ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್‌ನಲ್ಲಿ ಅಡಮಾನ ಇಟ್ಟು 40,000 ಕೋಟಿ ಡಾಲರ್‌ನಷ್ಟು ಸಾಲ ಮಾಡಲಾಗಿತ್ತು. ಆದರೆ ಮೋದಿ ಸರ್ಕಾರವು ಈಗ ಬ್ಯಾಂಕ್ ಆಫ್ ಇಂಗ್ಲೆಂಡ್‌ನಿಂದ ನೂರು ಟನ್‌ಗಳಷ್ಟು ಚಿನ್ನವನ್ನು ಭಾರತಕ್ಕೆ ತಂದಿದೆ’ ಎಂಬ ಸಂದೇಶ ಇರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಇದರಲ್ಲಿ ಇರುವ ಮಾಹಿತಿಗಳು ತಪ್ಪು.
1991ರಲ್ಲಿ ರಾಜೀವ್ ಗಾಂಧಿ ಅವರು ಪ್ರಧಾನಿ ಆಗಿರಲಿಲ್ಲ. 1991ರ ಮೇ 21ರಂದು ಅವರ ಹತ್ಯೆ ನಡೆದಿತ್ತು. ‘1991ರ ಜುಲೈನಲ್ಲಿ ಕೇಂದ್ರ ಸರ್ಕಾರವು ಬ್ಯಾಂಕ್ ಆಫ್ ಜಪಾನ್ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್‌ನಲ್ಲಿ 46.91 ಟನ್‌ಗಳಷ್ಟು ಚಿನ್ನವನ್ನು ಅಡಮಾನ ಇರಿಸಿತ್ತು. ಆ ಮೂಲಕ 40.5 ಕೋಟಿ ಡಾಲರ್ ಸಾಲ ಪಡೆಯಲಾಗಿತ್ತು. ಆದರೆ 1991ರ ಸೆಪ್ಟೆಂಬರ್ ಮತ್ತು ನವೆಂಬರ್‌ನಲ್ಲಿ ಎರಡು ಕಂತಿನಲ್ಲಿ ಸಾಲವನ್ನು ಮರುಪಾವತಿ ಮಾಡಿ, ಅಷ್ಟೂ ಚಿನ್ನವನ್ನು ಅಡಮಾನದಿಂದ ಬಿಡಿಸಿಕೊಳ್ಳಲಾಗಿತ್ತು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಚಿವಾಲಯದ ಅಧಿಕಾರಿಗಳು ರಾಜ್ಯಸಭೆಗೆ ಮಾಹಿತಿ ನೀಡಿದ್ದರು. ಈ ಪ್ರಕಾರ, ಮೇಲಿನ ಪೋಸ್ಟ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಮಾಹಿತಿ ತಪ್ಪು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.