ADVERTISEMENT

'ಯೋಧರ ವಿಷಯದಲ್ಲಿ ರಾಜಕೀಯ ಬೇಡ'- ವೈರಲ್ ವಿಡಿಯೊದಲ್ಲಿರುವುದು 'ಅಭಿ' ಪತ್ನಿ ಅಲ್ಲ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 16:18 IST
Last Updated 1 ಮಾರ್ಚ್ 2019, 16:18 IST
   

ಬೆಂಗಳೂರು:ಪಾಕಿಸ್ತಾನದ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಶಾಂತಿಯ ಸಂಕೇತವಾಗಿ ಬಿಡುಗಡೆ ಮಾಡುತ್ತೇವೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗುರುವಾರ ಘೋಷಣೆ ಮಾಡಿದ್ದರು.ಈ ಘೋಷಣೆಗೆ ಕೆಲವು ಗಂಟೆಗಳ ಮುನ್ನ ಯೋಧರ ತ್ಯಾಗವನ್ನು ರಾಜಕೀಯಕ್ಕೆ ಬಳಸಬೇಡಿ ಎಂದು ಮಹಿಳೆಯೊಬ್ಬರು ರಾಜಕಾರಣಿಗಳಲ್ಲಿ ಮನವಿ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಗಳಲ್ಲಿ ವೈರಲ್ ಆಗಿದೆ.ಯೋಧರ ಬಲಿದಾನಸವನ್ನು ರಾಜಕೀಯಕ್ಕೆ ಬಳಸಬೇಡಿ ಎಂದು ಬಿಜೆಪಿಯಲ್ಲಿ ವಿನಂತಿಸುತ್ತಿರುವ ವರ್ಧಮಾನ್ ಪತ್ನಿ ಎಂಬ ಶೀರ್ಷಿಕೆಯಲ್ಲಿ ಈ ವಿಡಿಯೊ ಫೇಸ್‍ಬುಕ್ ಮತ್ತು ಟ್ವಿಟರ್‌ನಲ್ಲಿ ಶೇರ್ ಆಗಿದೆ.

ಆದರೆ ಇದು ಅಭಿನಂದನ್ ಪತ್ನಿ ಅಲ್ಲ ಎಂದು ಬೂಮ್ ಲೈವ್ ಫ್ಯಾಕ್ಟ್‌ಚೆಕ್‌ ಮಾಡಿದೆ.

ಏನಿದು ನಿಜ ಸಂಗತಿ?
1.08 ನಿಮಿಷಅವಧಿಯ ಈ ವಿಡಿಯೊದಲ್ಲಿ ಮಹಿಳೆಯೊಬ್ಬರು, ನಾನು ಸೇನಾಧಿಕಾರಿಯ ಪತ್ನಿ ಎಂದು ಹೇಳಿ ಮಾತು ಶುರುಮಾಡಿದ್ದಾರೆ.ಗಮನಿಸಬೇಕಾದ ಅಂಶ ಎಂದರೆ ವರ್ಧಮಾನ್ ಭಾರತೀಯ ವಾಯುಪಡೆಯ ಪೈಲಟ್, ಭಾರತೀಯ ಸೇನಾ ಪಡೆಯ ಯೋಧ ಅಲ್ಲ.

ADVERTISEMENT

ಈ ವಿಡಿಯೊದ ಬಗ್ಗೆ ಮತ್ತಷ್ಟು ಸರ್ಚ್ ಮಾಡಿದಾಗ ವಿಡಿಯೊದಲ್ಲಿ ಮಹಿಳೆ ಗುರುಗ್ರಾಮದ ನಿವಾಸಿ ಸಿರಿಶಾ ರಾವ್ ಎಂದು ತಿಳಿದು ಬಂದಿದೆ.ಯೋಧರ ತ್ಯಾಗದ ಲೆಕ್ಕದಲ್ಲಿ ನಿಮ್ಮ ಸೀಟುಗಳನ್ನು ಎಣಿಕೆ ಮಾಡಬೇಡಿ. ಬಿಜೆಪಿಗೆ ನನ್ನ ವಿನಂತಿ ಎಂದು ಸಿರಿಶಾ ತಮ್ಮ ವೈಯಕ್ತಿಕ ಟ್ವಿಟರ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದರು.

ಈ ವಿಡಿಯೊ ಬಗ್ಗೆ ಬೂಮ್ ಟೀಂ ಶಿರಿಶಾ ಅವರಲ್ಲಿ ಕೇಳಿದಾಗ, ಹೌದು ನಾನು ವಿಡಿಯೊವನ್ನು ಟ್ವಿಟರ್ ಖಾತೆಯಲ್ಲಿ ಅಪ್‍ಲೋಡ್ ಮಾಡಿದ್ದೆ. ಗಡಿಭಾಗದಲ್ಲಿರುವ ಯೋಧರ ವಿಷಯವನ್ನು ರಾಜಕೀಯಮಾಡಬೇಡಿ ಎಂದು ನಾನು ವಿನಂತಿಸಿದ್ದೆ ಅಂದಿದ್ದಾರೆ.ರಾವ್ ಅವರು ಆಮ್ ಆದ್ಮಿ ಪಕ್ಷದ ಕಾರ್ಯಕರ್ತೆ ಆಗಿದ್ದು ಈಕೆ ಸೇನಾ ಪಡೆಯ ಕರ್ನಲ್ ಹೆಂಡತಿ. ಆದರೆ ಪತಿಯ ಬಗ್ಗೆ ವಿವರಗಳನ್ನು ಬಹಿರಂಗ ಪಡಿಸಲು ಈಕೆ ನಿರಾಕರಿಸಿದ್ದಾರೆ.

ನನ್ನ ವಿಡಿಯೊದಲ್ಲಿ ನಾನು ಸೇನಾಧಿಕಾರಿ ಪತ್ನಿ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದೇನೆ. ವರ್ಧಮಾನ್ ಪೈಲಟ್, ಅವರು ವಾಯುಪಡೆಯಲ್ಲಿದ್ದಾರೆ.ಹೀಗಿರುವಾಗ ನಾನು ವರ್ಧಮಾನ್ ಪತ್ನಿ ಎಂದು ಜನರು ಯಾಕೆ ಈ ವಿಡಿಯೊ ಶೇರ್ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.