ADVERTISEMENT

ಫ್ಯಾಕ್ಟ್ ಚೆಕ್: ನ್ಯುಮೋನಿಯಾ ಚುಚ್ಚುಮದ್ದು ಪಡೆಯುವುದರಿಂದ ಕೋವಿಡ್‌ ತಡೆಯಬಹುದೇ?

​ಪ್ರಜಾವಾಣಿ ವಾರ್ತೆ
Published 21 ಮೇ 2021, 19:30 IST
Last Updated 21 ಮೇ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ನ್ಯುಮೋನಿಯಾ ಚುಚ್ಚುಮದ್ದು ಪಡೆಯುವುದರಿಂದ ಕೋವಿಡ್‌ ತಡೆಯಬಹುದು. ಈ ಚುಚ್ಚುಮದ್ದು ಪಡೆದಿದ್ದರೆ, ಕೊರೊನಾ ಸೋಂಕು ತಗುಲಿದರೂ ಅದು ಕೋವಿಡ್‌ ಆಗಿ ಬದಲಾಗುವುದಿಲ್ಲ‘ ಎಂಬ ವಿವರ ಇರುವ ಪೋಸ್ಟರ್‌ಗಳು ಟ್ವಿಟರ್, ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ.

ಇದು ಸುಳ್ಳು ಸುದ್ದಿ ಎಂದು ಪಿಐಬಿ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ನ್ಯುಮೋನಿಯಾ ಚುಚ್ಚುಮದ್ದು, ನ್ಯುಮೋನಿಯಾವನ್ನು ಮಾತ್ರ ತಡೆಯುವ ಸಾಮರ್ಥ್ಯ ಹೊಂದಿದೆ. ನ್ಯುಮೋನಿಯಾ ಚುಚ್ಚುಮದ್ದು ಪಡೆಯುವುದರಿಂದ ಕೋವಿಡ್‌ ತಡೆಯಬಹುದು ಎಂಬುದರ ಕುರಿತಾಗಿ ಯಾವುದೇ ಸಂಶೋಧನೆ ನಡೆದಿಲ್ಲ ಮತ್ತು ಇದು ಸಾಬೀತಾಗಿಲ್ಲ. ಹೀಗಾಗಿ ಕೋವಿಡ್‌ ತಡೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಪಿಐಬಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT