ADVERTISEMENT

Fact Check: ರಾಹುಲ್‌ ಗಾಂಧಿ ಬ್ಯಾಂಕಾಕ್‌ಗೆ ಓಡಿಹೋಗಲಿದ್ದಾರೆ ಎನ್ನುವುದು ಸುಳ್ಳು

ಫ್ಯಾಕ್ಟ್ ಚೆಕ್
Published 3 ಜೂನ್ 2024, 23:55 IST
Last Updated 3 ಜೂನ್ 2024, 23:55 IST
<div class="paragraphs"><p>ರಾಹುಲ್‌ ಗಾಂಧಿ ಹೆಸರಿನಲ್ಲಿರುವ ವಿಸ್ತಾರ ವಿಮಾನಯಾನ ಸಂಸ್ಥೆಯ ಬೋರ್ಡಿಂಗ್‌ ಪಾಸ್‌ ಫೋಟೊವನ್ನು ತಿರುಚಲಾಗಿದೆ</p></div>

ರಾಹುಲ್‌ ಗಾಂಧಿ ಹೆಸರಿನಲ್ಲಿರುವ ವಿಸ್ತಾರ ವಿಮಾನಯಾನ ಸಂಸ್ಥೆಯ ಬೋರ್ಡಿಂಗ್‌ ಪಾಸ್‌ ಫೋಟೊವನ್ನು ತಿರುಚಲಾಗಿದೆ

   

ದೇಶದಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡು, ಜೂನ್‌ 1ರಂದು ಹಲವು ಸಂಸ್ಥೆಗಳು ನಡೆಸಿದ್ದ ಮತದಾನೋತ್ತರ ಸಮೀಕ್ಷೆಗಳು ಪ್ರಕಟಗೊಂಡವು. ಈ ಎಲ್ಲ ಸಮೀಕ್ಷೆಗಳೂ ಎನ್‌ಡಿಎಗೆ ಭಾರಿ ಬಹುಮತ ಘೋಷಿಸಿದವು. ಹೀಗಾಗಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಕುರಿತ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜೂನ್‌ 5ರ ಬಳಿಕ ರಾಹುಲ್‌ ಅವರು ಬ್ಯಾಂಕಾಕ್‌ಗೆ ಓಡಿಹೋಗಲಿದ್ದಾರೆ ಎನ್ನವ ಅರ್ಥದ ಪೋಸ್ಟ್‌ಗಳು ಹರಿದಾಡುತ್ತಿವೆ. ಆದರೆ, ಇದು ತಿರುಚಿದ ಚಿತ್ರ.

ರಾಹುಲ್‌ ಗಾಂಧಿಯ ಹೆಸರಿನಲ್ಲಿರುವ, ವಿಸ್ತಾರ ವಿಮಾನಯಾನ ಸಂಸ್ಥೆಯ ಬೋರ್ಡಿಂಗ್‌ ಪಾಸ್‌ನ ಫೋಟೊವು ತಿರುಚಿದ ಚಿತ್ರವಾಗಿದೆ. ‘ಲೈವ್‌ ಫ್ರಂ ಎ ಲಾಂಜ್‌’ ಎನ್ನುವ ಬ್ಲಾಗ್‌ನಲ್ಲಿ ಪ್ರಕಟಗೊಂಡಿದ್ದ ಚಿತ್ರವೊಂದನ್ನು ತಿರುಚಿ, ರಾಹುಲ್‌ ಅವರ ಬೋರ್ಡಿಂಗ್‌ ಪಾಸ್‌ ಎನ್ನಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.