ADVERTISEMENT

ಗಾಂಧೀಜಿಗೆ ಬ್ರಿಟಿಷರು ಮಾಸಿಕ ₹100 ನೀಡುತ್ತಿದ್ದರು ಎನ್ನುವುದು ಸುಳ್ಳು ಸುದ್ದಿ

ಪ್ರಜಾವಾಣಿ ವಿಶೇಷ
Published 17 ಆಗಸ್ಟ್ 2023, 23:34 IST
Last Updated 17 ಆಗಸ್ಟ್ 2023, 23:34 IST
   

ಜೈಲಿನಲ್ಲಿದ್ದ ಮಹಾತ್ಮ ಗಾಂಧೀಜಿ ಅವರಿಗೆ ಭತ್ಯೆ ನೀಡುವ ಕುರಿತು ಬ್ರಿಟಿಷರು (ಬಾಂಬೆ ಸರ್ಕಾರ) ಬರೆದ ನ್ಯಾಷನಲ್‌ ಆರ್ಕೈವ್ಸ್‌ ಆಫ್‌ ಇಂಡಿಯಾದಲ್ಲಿ ಲಭ್ಯ ಇರುವ ಪತ್ರವೊಂದು ಸಾಮಾಜಿಕ ಜಾಲತಾಣಗಳ‌ಲ್ಲಿ ಹರಿದಾಡುತ್ತಿದೆ. ಈ ಪತ್ರದೊಂದಿಗೆ, ‘ಮಹಾತ್ಮ ಗಾಂಧೀಜಿ ಅವರು 1930ರಂದು ಯೆರವಾಡ ಜೈಲಿಯಲ್ಲಿ ಶಿಕ್ಷೆ ಅನುಭವಿಸುತ್ತಿರುವಾಗ ಬ್ರಿಟಿಷರು ಅವರಿಗೆ ತಿಂಗಳಿಗೆ ₹100 ‘ಪಿಂಚಣಿ’ ನೀಡುತ್ತಿದ್ದರು’ ಎಂದು ಕಳೆದ ಅ.3ರಿಂದಲೂ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.

ಗಾಂಧೀಜಿ ಅವರ ಆರೋಗ್ಯ ಹಾಗೂ ಅನುಕೂಲಕ್ಕಾಗಿ ಅವರಿಗೆ ತಿಂಗಳಿಗೆ ₹100 ಭತ್ಯೆ ನೀಡಲು ಬ್ರಿಟಿಷರು (ಬಾಂಬೆ ಸರ್ಕಾರ) ನಿರ್ಧರಿಸಿದ್ದರು. ಆದರೆ, ಗಾಂಧೀಜಿ ಅವರು ಬ್ರಿಟಿಷರ ಭತ್ಯೆಯನ್ನು ನಿರಾಕರಿಸಿದ್ದರು. ಈ ಸಂಬಂಧ ಬ್ರಿಟಿಷರಿಗೆ ಅವರು ಪತ್ರವನ್ನೂ ಬರೆದಿದ್ದರು. ಈ ಪತ್ರವು ‘ದಿ ಕಲೆಕ್ಟೆಡ್‌ ವರ್ಕ್‌ ಆಫ್‌ ಮಹಾತ್ಮ ಗಾಂಧಿ ವಾಲ್ಯುಮ್‌ 49’ ಪುಸ್ತಕದಲ್ಲಿ ಮುದ್ರಿತವಾಗಿದೆ. ಜೊತೆಗೆ, ಬ್ರಿಟಿಷರು ಗಾಂಧೀಜಿ ಅವರಿಗೆ ಮಾತ್ರವೇ ಇಂಥ ಭತ್ಯೆ ನೀಡುವ ನಿರ್ಧಾರ ಮಾಡಿರಲಿಲ್ಲ. ಇನ್ನು ಹಲವು ಸ್ವಾತಂತ್ರ್ಯ ಹೋರಾಟಗಾರರಿಗೆ ಇದೇ ರೀತಿ ಭತ್ಯೆಯನ್ನು ನೀಡುತ್ತಿದ್ದರು. ಆದ್ದರಿಂದ, ಇಡೀ ಪ್ರಕರಣದ ಅರ್ಧವನ್ನು ಮಾತ್ರವೇ ಹಂಚಿಕೊಂಡು, ಗಾಂಧೀಜಿ ಅವರು ಬ್ರಿಟಿಷರಿಂದ ಪಿಂಚಣಿ ಪಡೆದುಕೊಳ್ಳುತ್ತಿದ್ದರು ಎಂಬುದು ಸುಳ್ಳು ಸುದ್ದಿ ಎಂದು ‘ಲಾಜಿಕಲಿ ಫ್ಯಾಕ್ಟ್ಸ್‌’ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT