ದೇಶದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ಅವರೇದೇಶ ವಿಭಜನೆಗೆ ಕಾರಣ ಎಂಬರ್ಥದ ಪೋಸ್ಟ್ ಒಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೆರಿಕದ ಸುದ್ದಿ ವಾಹಿನಿ ನಿರೂಪಕ ಅರ್ನಾಲ್ಡ್ ಮಿಶೇಲಿಸ್ ಎಂಬುವವರು 1964ರಲ್ಲಿ ನಡೆಸಿದ್ದ ನೆಹರೂ ಅವರ ಸಂದರ್ಶನದ ತುಣುಕೊಂದನ್ನು ಆಧಾರವಾಗಿ ಇರಿಸಿಕೊಂಡು ಈ ಮಾಹಿತಿ ಹಂಚಲಾಗುತ್ತಿದೆ. ‘ದೇಶ ವಿಭಜನೆಯ ನಿರ್ಧಾರ ನನ್ನದೇ’ ಎಂದು ನೆಹರೂ ಅವರು ಈ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ ಎಂಬಂತೆ ಈ ವಿಡಿಯೊವನ್ನು ಬಿಂಬಿಸಲಾಗಿದೆ.
ವೈರಲ್ ಆಗುತ್ತಿರುವ ವಿಡಿಯೊ ತುಣಕನ್ನು ದುರುದ್ದೇಶಪೂರ್ವಕವಾಗಿ ಬಳಸಿಕೊಳ್ಳಲಾಗಿದೆ ಎಂದು ಲಾಜಿಕಲ್ ಇಂಡಿಯನ್ ವೇದಿಕೆ ವರದಿ ಮಾಡಿದೆ. 45 ನಿಮಿಷಗಳ ಈ ವಿಡಿಯೊದಲ್ಲಿಯ ಒಂದು ತುಣುಕನ್ನು ವೈರಲ್ ಮಾಡಲಾಗಿದೆ. ‘ಭಾರತ ಮತ್ತು ಪಾಕಿಸ್ತಾನ ವಿಭಜನೆ ಕುರಿತು ನಿಮಗೆ ಮತ್ತು ಮಹಾತ್ಮ ಗಾಂಧಿ ಅವರಿಗೆ ಒಲವಿತ್ತಾ’? ಎಂಬ ಪ್ರಶ್ನೆ ಉತ್ತರಿಸುವ ನೆಹರು, ‘ನಮ್ಮಿಬ್ಬರಿಗೆ ದೇಶ ವಿಭಜನೆ ಆಗುವುದು ಬೇಕಿರಲಿಲ್ಲ. ಆದರೆ ಎಲ್ಲರ ಒತ್ತಾಸೆ ದೇಶ ವಿಭಜನೆ ಆಗುವುದೇ ಆಗಿದ್ದರಿಂದ ಸಮ್ಮತಿ ನೀಡಬೇಕಾಯಿತು’ ಎಂಬರ್ಥದಲ್ಲಿ ಉತ್ತರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.