ನಂದಿನಿ–ಅಮೂಲ್ ಸಂಘರ್ಷದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಂದಿನಿ ಪಾರ್ಲರ್‌ಗೆ ಭೇಟಿ ನೀಡಿ ಐಸ್‌ಕ್ರೀಂ ಸವಿದಿದ್ದರು. ನಂದಿನಿ ಕರ್ನಾಟಕದ ಹೆಮ್ಮೆ ಎಂದು ಶ್ಲಾಘಿಸಿದ್ದರು. ಕರ್ನಾಟಕದಲ್ಲಿ ನಂದಿನಿ ಪರವಾಗಿ ಮಾತನಾಡುವ ರಾಹುಲ್ ಅವರು ದೆಹಲಿಯಲ್ಲಿ ಅಮೂಲ್ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಲಾಗುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಚಿತ್ರದ ಹಿನ್ನೆಲೆಯಲ್ಲಿ ಅಮೂಲ್ ಗೋಲ್ಡ್ ಹಾಲಿನ ಕಾರ್ಟನ್ ಬಾಕ್ಸ್‌ನ ಚಿತ್ರವೊಂದು ಕಾಣಿಸುತ್ತದೆ. ರಾಹುಲ್ ಅವರು ಅಮೂಲ್ ಮಳಿಗೆಗೆ ಭೇಟಿ ನೀಡಿದ್ದಾರೆ ಎಂದು ಈ ಚಿತ್ರವನ್ನು ಉದ್ದೇಶಿಸಿ ಹೇಳಲಾಗಿದೆ. ಬಿಜೆಪಿ ನಾಯಕರು ಈ ಚಿತ್ರವನ್ನು ಹಂಚಿಕೊಂಡಿದ್ದು, ರಾಹುಲ್ ಅವರ ದ್ವಂದ್ವ ನಿಲುವನ್ನು ಪ್ರಶ್ನಿಸಿದ್ದಾರೆ. ಆದರೆ ಇದು ಸುಳ್ಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.