ADVERTISEMENT

ಫ್ಯಾಕ್ಟ್ ಚೆಕ್: ನಿತೀಶ್ ಕುಮಾರ್ ಪಾದಯಾತ್ರೆ ವಿಡಿಯೊ ಹಳೆಯದು

ಫ್ಯಾಕ್ಟ್ ಚೆಕ್
Published 15 ಜುಲೈ 2024, 21:15 IST
Last Updated 15 ಜುಲೈ 2024, 21:15 IST
...
...   

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯಕ್ಕೆ ವಿಶೇಷ ವರ್ಗ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ಪಟ್ನಾದಲ್ಲಿ ಪಾದಯಾತ್ರೆ ನಡೆಸಿದ ವಿಡಿಯೊ ಒಂದು ಎಕ್ಸ್‌, ಫೇಸ್‌ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೊ ಅನ್ನು ಹಂಚಿಕೊಳ್ಳುತ್ತಿರುವ ಅನೇಕರು, ಎನ್‌ಡಿಎ ಅಂಗಪಕ್ಷಗಳಾದ ಜೆಡಿಯು ಮತ್ತು ಬಿಜೆಪಿ ನಡುವೆ ಮನಸ್ತಾಪ ಹುಟ್ಟಿಕೊಂಡಿದೆ ಎಂದು ಕೂಡ ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ಈ ವಿಡಿಯೊ ಅನ್ನು ಇನ್‌ವಿಡ್ ಟೂಲ್ ಸರ್ಚ್‌ಗೆ ಒಳಪಡಿಸಿ, ಗೂಗಲ್ ಲೆನ್ಸ್ ಮೂಲಕ ಪರಿಶೀಲನೆಗೆ ಮಾಡಿದಾಗ, ಒಂದೇ ವಿಡಿಯೊ ಅನ್ನು ಹಲವರು ಹಂಚಿಕೊಂಡಿರುವುದು ಕಂಡುಬಂತು. ವಿಡಿಯೊ ಅನ್ನು ಮತ್ತಷ್ಟು ಪರಿಶೀಲಿಸಿದಾಗ, ಅದು ಮಾರ್ಚ್ 2014ರ ವಿಡಿಯೊ ಎನ್ನುವುದು ತಿಳಿಯಿತು. ಆಗಲೂ ಬಿಹಾರದ ಮುಖ್ಯಮಂತ್ರಿ ಆಗಿದ್ದ ನಿತೀಶ್ ಅವರು ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ಪಟ್ನಾದಲ್ಲಿ ನಡೆಸಿದ್ದ ಪಾದಯಾತ್ರೆಗೆ ಸಂಬಂಧಿಸಿದ ವಿಡಿಯೊ ಅದು. ಹಳೆಯ ವಿಡಿಯೊ ಅನ್ನು ಕೆಲವರು ತಪ್ಪು ಅರ್ಥ ಬರುವಂತೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT