ADVERTISEMENT

ವೈಮಾನಿಕ ಸಮೀಕ್ಷೆಗೆ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾಗ ಮೋದಿ ವಿರುದ್ಧ ಘೋಷಣೆ ಹೌದೇ?

​ಪ್ರಜಾವಾಣಿ ವಾರ್ತೆ
Published 24 ಮೇ 2020, 19:30 IST
Last Updated 24 ಮೇ 2020, 19:30 IST
ವೈಮಾನಿಕ ಸಮೀಕ್ಷೆಗೆಂದು ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ
ವೈಮಾನಿಕ ಸಮೀಕ್ಷೆಗೆಂದು ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ   

ಪಶ್ಚಿಮ ಬಂಗಾಳದಲ್ಲಿ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಗೆಂದು ಹೆಲಿಕಾಪ್ಟರ್‌ ಏರುವಾಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ, ‘ಚೌಕೀದಾರ್ ಛೋರ್ ಹೆ (ಕಾವಲುಗಾರನೇ ಕಳ್ಳ)’ ಎಂಬ ಘೋಷಣೆ ಕೂಗಲಾಗಿದೆ. ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೆಲಿಕಾಪ್ಟರ್‌ ಬಳಿ ತೆರಳುವಾಗ ಈ ಘೋಷಣೆ ಕೇಳುತ್ತದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆದರೆ, ಈ ವಿಡಿಯೊದಲ್ಲಿ ಮೋದಿ ವಿರುದ್ಧ ಘೋಷಣೆ ಕೂಗುತ್ತಿರುವುದು ಸುಳ್ಳು ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. ಆಕಾಶವಾಣಿಯ ಸಂಘಬಾದ್ ಕೇಂದ್ರವು ಮೂಲ ವಿಡಿಯೊವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿತ್ತು. ಅದರಲ್ಲಿ ಮೋದಿ ವಿರುದ್ಧ ಘೋಷಣೆ ಕೂಗಿರುವುದು ದಾಖಲಾಗಿಲ್ಲ. ಹಿಂದಿನ ಲೋಕಸಭಾ ಚುನಾವಣೆ ವೇಳೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೋದಿ ವಿರುದ್ಧ ‘ಕಾವಲುಗಾರನೇ ಕಳ್ಳ’ ಘೋಷಣೆ ಕೂಗಿದ್ದರು. ಆ ಆಡಿಯೊ ತುಣುಕನ್ನು, ಈ ವಿಡಿಯೊ ಜತೆ ಸೇರಿಸಿ ವೈರಲ್ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT